ದೇಶದೆಲ್ಲೆಡೆ ಸಂಕ್ರಾಂತಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Sankranthi-012

ನವದೆಹಲಿ,ಜ.14-ಸುಗ್ಗಿಯ ಸಂಕೇತವಾದ ಸಂಕ್ರಾಂತಿ ಹಬ್ಬವನ್ನು ಇಂದು ರಾಜಧಾನಿ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಅಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ರಾಷ್ಟ್ರದ ಜನತೆಗೆ ಸಂಕ್ರಾಂತಿ ಶುಭಾಷಯ ಕೋರಿದರು.   ಕರ್ನಾಟಕ, ಪುದುಚೇರಿ, ಆಂಧ್ರಪ್ರದೇಶ, ಬಿಹಾರ, ಗೋವಾ, ಸಿಕ್ಕಿಮ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಓರಿಸ್ಸಾ, ಉತ್ತರಪ್ರದೇಶ, ಉತ್ತರಾಂಚಲ ಪ.ಬಂಗಾಳದ ಜನರು ಮಕರ ಸಂಕ್ರಾಂತಿಯನ್ನು ಉತ್ಸಾಹದಿಂದ ಆಚರಿಸಿದರು. ಸಂಕ್ರಾಂತಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರಿನಲ್ಲಿ ಆಚರಿಲಾಗುತ್ತಿದ್ದು, ತಮಿಳುನಾಡಿನಲ್ಲಿ ಪೊಂಗಲ್(ಹೊಸ ವರ್ಷದ ಹಬ್ಬ), ರಾಜಸ್ಥಾನ, ಗುಜರಾತ್‍ನಲ್ಲಿ ಉತ್ತರಾಯಣ, ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬ್‍ನಲ್ಲಿ ಮಾಘಿ ಅಥವಾ ಬೈಶಾಕಿ, ಅಸ್ಸೋಂನಲ್ಲಿ ಮಾಘಬಿಹು, ಕಾಶ್ಮೀರದಲ್ಲಿ ಶಿಶುರ ಸೇಂಕ್ರಾತವನ್ನು ಆಚರಿಸಿ ಸಂಭ್ರಮಿಸಿದರು.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಧವಸಧಾನ್ಯಗಳಿಗೆ ಪೂಜೆ ಸಲ್ಲಿಸುವ ಮೂಲಕ ಸುಗ್ಗಿ ಹಬ್ಬವನ್ನು ಆಚರಿಸಿ ವಸಂತ ಋತುವನ್ನು ಸ್ವಾಗತಿಸಿದರು.   ಶಬರಿಮಲೈಯಲ್ಲಿ ಮಕರವಿಲಕ್ಕು ಹೆಸರಿನಲ್ಲಿ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.  ಪುದುಚೇರಿಯಲ್ಲಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ವಿಧಾನಸಭಾಧ್ಯಕ್ಷ ವೈದ್ಯಲಿಂಗಂ ಮೊದಲಾದವರು ಮಣಕುಲ ವಿನಾಯಕ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಲೆಫ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ ರಾಜ್ ನಿವಾಸದಲ್ಲಿ ಪೊಂಗಲ್ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮವನ್ನು ಪಾಲ್ಗೊಂಡಿದ್ದರು.

ಸಂಕ್ರಾಂತಿ ಹಬ್ಬವನ್ನು ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಂಭ್ರಮದಿಂದ ಆಚರಿಸಲಾಗಿದ್ದು, ಅಮೆರಿಕ, ಇಂಗ್ಲೆಂಡ್‍ನಲ್ಲಿ ನೆಲೆಸಿರುವ ಭಾರತೀಯರು ಸಂಕ್ರಾಂತಿಯನ್ನು ಸಿಹಿಹಂಚುವ ಮೂಲಕ ಪರಸ್ಪರ ಶುಭ ಕೋರಿ ಆಚರಿಸಿಕೊಂಡರು. ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಮಾಘಿ, ಮಿಯಾಂಮಾರ್‍ನಲ್ಲಿ ಥಿಂಗ್ಯಾನ, ಕಂಬೋಡಿಯಾದಲ್ಲಿ ಮೊಹಸಂಗ್ರನ, ಥೈಲೆಂಡ್‍ದಲ್ಲಿ ಸಂಗ್ರಾನ ಹೆಸರಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin