‘ಫ್ರೀ ಇದ್ದೀಯಾ, ಬರ್ತಿಯಾ’ ಎಂದು ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಿ ಪೊಲೀಸರ ಅಥಿತಿಯಾದ

ಈ ಸುದ್ದಿಯನ್ನು ಶೇರ್ ಮಾಡಿ

Whatsapp

ಬೆಂಗಳೂರು, ಜ.14– ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕಿಗೆ ಅಶ್ಲೀಲ ಸಂದೇಶ ರವಾನಿಸಿದ್ದ ವ್ಯಕ್ತಿಯೊಬ್ಬನನ್ನು ಮಲ್ಲೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಿವರಾಜ್ ಪೊಲೀಸರ ವಶದಲ್ಲಿರುವ ವ್ಯಕ್ತಿ. ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕಿಗೆ ವಾಟ್ಸಾಪ್‍ನಲ್ಲಿ ಫ್ರೀ ಇದ್ದೀಯಾ, ಬರ್ತಿಯಾ, ಐ ಲವ್ ಯೂ, ಐ ಮಿಸ್ ಯೂ ಎಂದೆಲ್ಲ ಅಸಭ್ಯ ಸಂದೇಶ ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂಬಂಧ ಉಪನ್ಯಾಸಕಿ ಮಲ್ಲೇಶ್ವರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಕ್ರಮ ಕೈಗೊಂಡ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin