ಜಲ್ಲಿಕಟ್ಟು ಅನುಮತಿ ನಿರಾಕರಣೆ ವಿರೋಧಿಸಿ ಪಾಲಮೇಡು ಬಂದ್, ಹಲವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Jellikattu-01

ಮಧುರೈ, ಜ.1- ಪೊಂಗಲ್ ಹಬ್ಬದಂದು ನಡೆಯುವ ಜಲ್ಲಿಕಟ್ಟು ಜನಪ್ರಿಯ ಸಾಹಸ ಕ್ರೀಡೆಗೆ ಸುಪ್ರೀಂಕೋರ್ಟ್ ಅನುಮತಿ ನಿರಾಕರಿಸಿರುವುದರ ವಿರುದ್ದ ತಮಿಳುನಾಡಿನ ವಿವಿಧೆಡೆ ಇಂದೂ ಕೂಡ ಪ್ರತಿಭಟನೆ ಮುಂದುವರೆದಿದೆ. ಮಧುರೈ ಸೇರಿದಂತೆ ವಿವಿಧೆಡೆ ಜಲ್ಲಿಕಟ್ಟು ಆಯೋಜಿಸಲು ಯತ್ನಿಸಿದ ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ಧಾರೆ. ಮಧುರೈನ ಪಾಲಮೇಡು ಪ್ರದೇಶದಲ್ಲಿ ಇಂದು ಬಂದ್ ಆಚರಿಸುವ ಮೂಲಕ ಜಲ್ಲಿಕಟ್ಟು ಆಸಕ್ತರು ಕೇಂದ್ರ ಸರ್ಕಾರ ಮತ್ತು ಸುಪ್ರೀಂಕೋರ್ಟ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಧುರೈ ಜಿಲ್ಲೆಯ ಮುದಕಾಂತನ್, ಅಲ್ಲಂಗನಲ್ಲೂರು, ಪಾಲಮೇಡು, ಮತ್ತು ವಿಲಾನ್‍ಗುಡಿ, ದಿಂಡಿಗಲ್ ಜಿಲ್ಲೆಯ ನಲ್ಲಂಪಟ್ಟಿ ಹಾಗೂ ತಂಜಾವೂರ್ ಜಿಲ್ಲೆಯ ಪೊಟ್ಟುಚಾವಡಿ ಗ್ರಾಮಗಳಲ್ಲಿ ಜಲ್ಲಿಕಟ್ಟು ಆಯೋಜಿಸಲು ಸಿದ್ದತೆ ನಡೆಸುತ್ತಿದ್ದ ಅನೇಕ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin