ದೋಣಿ ದುರಂತ : ಸತ್ತವರ ಸಂಖ್ಯೆ 26ಕ್ಕೇರಿಕೆ, ಪ್ರಧಾನಿ ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Ganga-River

ಪಾಟ್ನಾ, ಜ.15-ಮಕರ ಸಂಕ್ರಾಂತಿ ಸಂದರ್ಭದಲ್ಲಿ ಬಿಹಾರದ ರಾಜಧಾನಿ ಪಟ್ನಾ ಸಮೀಪ ಗಂಗಾ ನದಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ದೋಣಿ ದುರಂತದಲ್ಲಿ ಸತ್ತವರ ಸಂಖ್ಯೆ 26ಕ್ಕೇರಿದೆ. ನಾಪತ್ತೆಯಾಗಿರುವವರಿಗೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ದುರ್ಘಟನೆಯಲ್ಲಿ ಮೃತರಾದವರ ಕುಟುಂಬವರಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ತಲಾ 50,000 ರೂ. ತುರ್ತು ಪರಿಹಾರ ಪ್ರಕಟಿಸಲಾಗಿದೆ.

ದೋಣಿ ದುರಂತದಲ್ಲಿ ಮೃತಪಟ್ಟ 26 ಶವಗಳನ್ನು ಈವರೆಗೆ ನೀರಿನಿಂದ ಹೊರತೆಗೆಯಲಾಗಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ದೋಣಿ ದುರಂತದಲ್ಲಿ ಕಣ್ಣರೆಯಾದವರಿಗಾಗಿ ಎನ್‍ಡಿಆರ್‍ಎಫ್‍ನ ಮೂರು ತಂಡಗಳು ನಿನ್ನೆ ರಾತ್ರಿಯಿಂದ ಶೋಧ ಕಾರ್ಯಾಚರಣೆ ಮುಂದುವರಿಸಿವೆ.  ಸಂಕ್ರಾಂತಿ ನಿಮಿತ್ತ ಗಂಗಾ ನದಿ ದಂಡೆ ಮೇಲೆ ಆಯೋಜನಿಸಿದ್ದ ಗಾಳಿಪಟ ಉತ್ಸವ ವೀಕ್ಷಿಸಿ ಹಿಂದಿರುಗುತ್ತಿದ್ದ 40 ಪ್ರಯಾಣಿಕರಿದ್ದ ದೋಣಿ ಮಗುಚಿತು. ಈ ದುರಂತದಲ್ಲಿ ಗಾಯಗೊಂಡಿರುವ 10 ಮಂದಿ ಪಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಘಟನೆ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತನಿಖೆಗೆ ಆದೇಶಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin