ಯುವತಿ ಮುಖ ಕಚ್ಚಿದ ಒಬಾಮಾರ ಮುದ್ದಿನ ನಾಯಿ ಸನ್ನಿ ..!

ಈ ಸುದ್ದಿಯನ್ನು ಶೇರ್ ಮಾಡಿ

Obama-Dog

ವಾಷಿಂಗ್ಟನ್, ಜ.15-ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಮನೆಗೆ ಹೋಗಿದ್ದ 18 ವರ್ಷದ ಯುವತಿಯ ಮುಖಕ್ಕೆ ಅವರ ಸಾಕುನಾಯಿಯೊಂದು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ. ಶ್ವಾನದ ಆಕ್ರಮಣಕ್ಕೆ ಒಳಗಾದ ಹುಡುಗಿ ಮುಖಕ್ಕೆ ಹೊಲಿಗೆಗಳನ್ನು ಹಾಕಲಾಗಿದೆ. ಅಮೆರಿಕ ಅಧ್ಯಕ್ಷರ ಮನೆಗೆ ಅತಿಥಿಯಾಗಿ ಹೋಗಿದ್ದ ಯುವತಿಯು ಸನ್ನಿ ಹೆಸರಿನ ನಾಲ್ಕು ವರ್ಷದ ಪೋರ್ಚ್‍ಗೀಸ್ ವಾಟರ್ ಶ್ವಾನ ಮೈದಡವಲು ಹೋದಾಗ ಆದು ಹಠಾತ್ ಆಕ್ರಮಣ ಮಾಡಿ ಆಕೆಯ ಮುಖಕ್ಕೆ ಕಚ್ಚಿತು. ಸನ್ನಿಯು ಯುವತಿ ಕಣ್ಣಿನ ಕೆಳಭಾಗಕ್ಕೆ ಬಲವಾಗಿ ಕಚ್ಚಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.  ಒಬಾಮ ಅವರ ಕುಟುಂಬ ವೈದ್ಯ ಡಾ. ರಾನಿ ಜಾಕ್ಸನ್ ಯುವತಿಗೆ ಚಿಕಿತ್ಸೆ ನೀಡಿ ಮುಖಕ್ಕೆ ಹೊಲಿಗೆಗಳನ್ನು ಹಾಕಿದ್ದಾರೆ ಎಂದು ಟಿಎಂಜಡ್.ಕಾಂ ವರದಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin