ಸಮಾಧಿ ಮಾಡುವ ವೇಳೆ ಶವಪೆಟ್ಟಿಗೆಯಿಂದ ಎದ್ದ ಮೃತ ವೃದ್ದ…!

ಈ ಸುದ್ದಿಯನ್ನು ಶೇರ್ ಮಾಡಿ

CHina-Dead-Man

ಬೀಜಿಂಗ್, ಜ.15-ಸಮಾಧಿ ಮಾಡಲು ಕೊಂಡೊಯ್ಯಲಾಗಿದ್ದ ಶವವೊಂದು ಶವಪೆಟ್ಟಿಗೆಯಿಂದ ಎದ್ದು ಕುಳಿತು ಎಲ್ಲರನ್ನೂ ಚಕಿತಗೊಳಿಸಿದ ಘಟನೆ ಚೀನಾದಲ್ಲಿ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ. ಹ್ವಾಂಗ್ ಮಿಂಗ್ ಕುವಾನ್ ಎಂಬ ವೃದ್ದನಿಗೆ 75 ವರ್ಷ. ವಯೋಸಹಜ ಅನಾರೋಗ್ಯವು ಕಾಡುತ್ತಿತ್ತು. ತೀವ್ರ ಶೀತದಿಂದ ಬಳಲುತ್ತಿದ್ದ ಅವರು ಪಾದ ಮತ್ತು ಕೈಗಳು ಸೆಟೆದುಕೊಂಡಿದ್ದವು. ಕಣ್ಣುಗಳು ಮುಚ್ಚಿದ್ದವು. ಅವರ ಉಸಿರಾಟ ನಿಂತಿತ್ತು. ಮಿಂಗ್ ಮೃತಪಟ್ಟಿರುವುದಾಗಿ ಮಗ, ಕುಟುಂಬದ ಸದಸ್ಯರು ಮತ್ತು ಬಂಧು-ಮಿತ್ರರು ಭಾವಿಸಿದ್ದರು.

ಅವರ ಅಂತ್ಯ ಸಂಸ್ಕಾರಕ್ಕೆ ಸಿದ್ದತೆಗಳು ನಡೆದಿದ್ದವು. ಅವರನ್ನು ಶವಪೆಟ್ಟಿಗೆಯಲ್ಲಿಟ್ಟು ಸ್ಮಶಾನಕ್ಕೆ ಕೊಂಡೊಯ್ದರು. ಹಳ್ಳದೊಳಗೆ ಶವಪಟ್ಟಿಗೆಯನ್ನು ಇನ್ನೇನು ಇಳಿಸಬೇಕು ಎನ್ನುವಷ್ಟರಲ್ಲಿ ಮಿಂಗ್ ಕಣ್ಣು ತೆರೆದರು. ಮರದ ಬಾಗಿಲನ್ನು ದೂಡಿ ಎದ್ದು ಕುಳಿತರು. ಈ ದೃಶ್ಯ ನೋಡಿ ಅಲ್ಲಿದ್ದ ಎಲ್ಲರಿಗೂ ಗಾಬರಿ ಮತ್ತು ಅಚ್ಚರಿಯಾಯಿತು. ಏನಾಗುತ್ತಿದೆ ಇಲ್ಲಿ. ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ? ಇದು ನನ್ನ ಅಂತ್ಯ ಸಂಸ್ಕಾರವೇ ಎಂದು ಶಾಂತವಾಗಿ ಪ್ರಶ್ನಿಸಿದರು. ತನ್ನ ತಂದೆ ಬದುಕಿದ್ದಾರೆ ಎಂಬ ಸಂತಸದಿಂದ ಅವರನ್ನು ಶವಪೆಟ್ಟಿಗೆಯಿಂದ ಹೊರಗೆ ತಂದರು. ನಡೆದ ಪ್ರಮಾದಕ್ಕಾಗಿ ನೆರೆದವರ ಕ್ಷಮೆ ಕೋರಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin