ಮುಂಜಾಗ್ರತೆ ವಹಿಸುವಂತೆ ಪೊಲೀಸರಿಗೆ ಸಿದ್ದರಾಮಯ್ಯ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

police

ಬೆಂಗಳೂರು, ಜ.16- ಹಿಂದಿನ ವರ್ಷ ನಡೆದ ಅಪರಾಧ ಕೃತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಮುಂಜಾಗ್ರತೆ ವಹಿಸುವುದರ ಜತೆಗೆ ವೃತ್ತಿಪರತೆಯಿಂದ ಪೊಲೀಸರು ಕೆಲಸ ನಿರ್ವಹಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹಿರಿಯ ಪೊಲೀಸ್ ಅಕಾರಿಗಳ ವಾರ್ಷಿಕ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಇಲಾಖೆಗಳಿಗಿಂತಲೂ ಪೊಲೀಸ್ ಇಲಾಖೆ ಹೆಚ್ಚಿನ ಜನಸಂಪರ್ಕ ಹೊಂದಿರುವ ಇಲಾಖೆ. ಹಾಗಾಗಿ ದಕ್ಷತೆ, ಪ್ರಾಮಾಣಿಕತೆಯಿಂದ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ನಂಬಿಕೆ, ವಿಶ್ವಾಸಾರ್ಹತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದರು.  ತಳಮಟ್ಟದ ಅಕಾರಿಗಳಿಂದ ಮೇಲ್ವರ್ಗದ ಅಕಾರಿಗಳವರೆಗೆ ಎಲ್ಲರೂ ಹೆಚ್ಚು ಜಾಗರೂಕರಾಗಿ ಕೆಲಸ ನಿರ್ವಹಿಸಬೇಕಿದೆ.

ಈ ಹಿಂದೆ ಅಪರಾಧ ಕೃತ್ಯಗಳು ಹೆಚ್ಚಾಗಿರಲಿಲ್ಲ. ಆದರೆ, ಈಗ ಹೆಚ್ಚಾಗುತ್ತಿವೆ.ಪೊಲೀಸರ ಬಳಿ ಬಂದು ದೂರು ನೀಡಿದವರು ಮಾಧ್ಯಮದ ಮುಂದೆಯೂ ಹೋಗುತ್ತಾರೆ. ಹಾಗಾಗಿ ಹೆಚ್ಚೆಚ್ಚು ಪ್ರಚಾರ ಸಿಗುತ್ತಿದೆ ಎಂದರು. ಯಾವುದೇ ಪ್ರಕರಣಗಳು ನಡೆದ ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಆಯಾ ಇನ್ಸ್‍ಪೆಕ್ಟರ್‍ಗಳು ಮಾತ್ರ ಅದಕ್ಕೆ ಹೊಣೆಗಾರರಾಗಿರುವುದಿಲ್ಲ. ಡಿವೈಎಸ್‍ಪಿ, ಎಸ್‍ಪಿಯವರು ಹೆಚ್ಚಿನ ಹೊಣೆಗಾರರಾಗಿರುತ್ತಾರೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin