ರೋಚಕ ಗೆಲುವಿಗೆ ಕಾರಣನಾದ ಜಾಧವ್‍ರ ಗುಣಗಾನ ಮಾಡಿದ ಕ್ಯಾಪ್ಟನ್ ಕೊಹ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Kohli-Kedar--------v

ಪುಣೆ, ಜ.16- ಇಂಗ್ಲೆಂಡ್ ವಿರುದ್ಧ ವಿರೋಚಿತ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಯುವ ಆಟಗಾರ ಕೇದಾರ್ ಜಾಧವ್ ಅವರನ್ನು ನಾಯಕ ವಿರಾಟ್ ಕೊಹ್ಲಿ ಗುಣಗಾನ ಮಾಡಿದ್ದಾರೆ. ನಿನ್ನೆ ಭಾರತ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಕ್ರೀಸ್‍ಗೆ ಇಳಿದ ಕೇದಾರ್ ಜಾಧವ್‍ರ ಆಟ ಅಮೋಘವಾಗಿದ್ದು ಐದನೇ ವಿಕೆಟ್‍ಗೆ ನಾನು ಹಾಗೂ ಜಾಧವ್ ಸೇರಿಸಿದ 200 ರನ್‍ಗಳ ಜೊತೆಯಾಟ ಅದ್ಭುತವಾಗಿತ್ತು. ಚೇಸಿಂಗ್‍ಗೆ ಹೇಳಿ ಮಾಡಿಸಿದ ಪಿಚ್‍ನಲ್ಲಿ 6ನೆ ಕ್ರಮಾಂಕದಲ್ಲಿ ಇಳಿದ ಆ ಯುವ ಆಟಗಾರ ತನ್ನ ಸ್ಲಾಗ್ ಶಾಟ್ಸ್‍ಗಳಿಂದ ಎದುರಾಳಿ ಸ್ಪಿನ್ ಬೌಲರ್‍ಗಳನ್ನು ದಂಡಿಸಿದ ರೀತಿ ಆತನಲ್ಲಿರುವ ಬ್ಯಾಟಿಂಗ್ ಕೌಶಲ್ಯವನ್ನು ತೋರಿಸುವಂತಿದೆ.

12 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‍ಗಳಿಂದ ನೆರವಿನಿಂದ 351 ರನ್‍ಗಳ ಗುರಿಯನ್ನು ಭಾರತ ಇನ್ನು 11 ಎಸೆತಗಳು ಬಾಕಿ ಇರುವಂತೆ ಜಯಿಸಿದ್ದರಲ್ಲಿ ಕೇದಾರ್ ಜಾಧವ್ (120 ರನ್, 76 ರನ್)ರ ಪಾತ್ರ ಅದ್ಭುತವಾಗಿತ್ತು ಎಂದು ಕೊಹ್ಲಿ ಕೊಂಡಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin