ಹೆಣ್ಣುಮಕ್ಕಳಿಗೆ ತೊಂದರೆ ನೀಡಿದರೆ ತಲೆ ಕಡಿಯುವೆ : ಮಕ್ಕಳಿಗೆ ಶಾರೂಕ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Sharukha-kHan

ಮುಂಬೈ,ಜ.16-ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿರುವ ಬಾಲಿವುಡ್ ಖ್ಯಾತ ನಟ ಶಾರೂಕ್ ಖಾನ್, ಹೆಣ್ಣು ಮಕ್ಕಳಿಗೆ ತೊಂದರೆ ನೀಡಿದರೆ ತಲೆ ಕಡಿಯುವುದಾಗಿ ನನ್ನ ಇಬ್ಬರು ಗಂಡು ಮಕ್ಕಳಿಗೆ ನಾನು ಎಚ್ಚರಿಕೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.  ಸಿನಿಮಾ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನನ್ನ ಮಕ್ಕಳಾದ ಆರ್ಯನ್ ಮತ್ತು ಅಬ್‍ರಾಮ್ ಅವರಿಗೆ ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ತೊಂದರೆ ನೀಡಬಾರದೆಂದು ನಾನು ತಾಕೀತು ಮಾಡಿದ್ದೇನೆ. ತೊಂದರೆ ನೀಡಿದರೆ ನಿಮ್ಮ ತಲೆ ಕಡಿಯುವುದಾಗಿ ನಾನು ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದೇನೆ ಎಂದು ಹೇಳಿದ್ದಾರೆ.

ಏನೇ ಬದಲಾವಣೆಗಳಾದರೂ ಭಾರತದ ಸಂಸ್ಕøತಿಯಲ್ಲಿ ಬದಲಾವಣೆಯಾಗದು. ಹೀಗಾಗಿ ಪ್ರತಿಯೊಬ್ಬರು ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಗೌರವದಿಂದ ನೋಡಬೇಕು ಎಂದು ಅವರು ತಿಳಿಸಿದರು.  ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಯುವತಿಯರ ಮೇಲೆ ನಡೆದ ಸರಣಿ ಲೈಂಗಿಕ ದೌರ್ಜನ್ಯದ ಘಟನೆಗಳನ್ನು ಖಂಡಿಸಿರುವ ಶಾರೂಕ್, ಇಂಥ ಘಟನೆಗಳು ದೇಶದ ಯಾವ ಭಾಗದಲ್ಲೂ ಮರುಕಳಿಸಬಾರದು ಎಂದು ಪ್ರತಿಕ್ರಿಯಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin