‘ಅಮ್ಮ’ನ ಜನ್ಮದಿನದಂದು ದೀಪಾ ಮುಂದಿನ ನಡೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Deepa-Jayalaitha

ಚೆನ್ನೈ,ಜ.17-ಪುರುಚ್ಚಿ ತಲೈವಿ ಜಯಲಲಿತಾ ಅವರ ಜನ್ಮದಿನವಾದ ಫೆ.24ರಂದು ತಾವು ಯಾವ ಪಕ್ಷ ಸೇರ್ಪಡೆಯಾಗಬೇಕು ಅಥವಾ ಸ್ವತಂತ್ರ ಪಕ್ಷ ರಚಿಸಬೇಕೆ ಎಂಬ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಇಂದು ರಾಜಕೀಯ ರಂಗ ಪ್ರವೇಶಿಸಿರುವ ಜಯಾ ಅವರ ಅಣ್ಣನ ಮಗಳು ದೀಪಾ ಜಯಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ತಾವು ಎಐಎಡಿಎಂಕೆ ಪಕ್ಷ ಸೇರಬೇಕೊ ಅಥವಾ ಸ್ವಂತ ರಚಿಸಬೇಕೊ ಎಂಬ ಎರಡು ಆಯ್ಕೆಗಳಿವೆ. ಜಯಾರ ಜನ್ಮ ದಿನದಂದು ಈ ಬಗ್ಗೆ ನನ್ನ ಅಂತಿಮ ನಿರ್ಧಾರ ಘೋಷಿಸುತ್ತೇನೆ ಎಂದರು.
ಅಮ್ಮ ನನ್ನಲ್ಲಿದ್ದಾರೆ ಎಂಬ ಬಲವಾದ ಭಾವನೆ ನನಲ್ಲಿದೆ. ಇದೇ ಕಾರಣಕ್ಕಾಗಿ ನಾನು ಜಯಲಲಿತಾ ಅವರನ್ನು ಹೋಲುತ್ತೇನೆ ಮತ್ತು ಅವರಂತೆಯೇ ಸೀರೆ ಧರಿಸುತ್ತೇನೆ, ಜಯಲಲಿತಾ ಅವರ ತತ್ವ ಸಿದ್ದಾಂತ ಮತ್ತು ನೀತಿಗಳನ್ನು ಮುಂದುವರೆಸಬೇಕೆಂಬದು ನನ್ನ ಮಹತ್ವಾಕಾಂಕ್ಷೆಯಾಗಿದೆ ಎಂದು ದೀಪಾ ಹೇಳಿದರು.

ಜಯಾ ಅವರ ಅಸಂಖ್ಯಾತ ಬೆಂಬಲಿಗರು ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರ ಹಿತಾಸಕ್ತಿಗಾಗಿ ನಾನು ಚೆನ್ನಾಗಿ ಆಲೋಚಿಸಿ ಉತ್ತಮ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಎಂಜಿಆರ್ 100ನೇ ಜನ್ಮದಿನಾಚರಣೆ: ಖ್ಯಾತ ಚಿತ್ರನಟ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಅಣ್ಣಾ ಡಿಎಂಕೆ ಪಕ್ಷದ ಸಂಸ್ಥಾಪಕರಾದ ಡಾ.ಎಂ.ಜಿ.ರಾಮಚಂದ್ರನ್(ಎಂಜಿಆರ್) ಅವರ 100ನೇ ಜನ್ಮ ದಿನಾಚರಣೆ ಪ್ರಯುಕ್ತ ಇಂದು ತಮಿಳುನಾಡಿನಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು.  ಚೆನ್ನೈನ ಮರಿನಾಬೀಚ್‍ನಲ್ಲಿರುವ ಡಾ.ಎಂ.ಜಿ.ಆರ್ ಅವರ ಸಮಾಧಿ ಮುಂದೆ ಜಮಾಯಿಸಿದ್ದ ಸಹಸ್ರಾರು ಜನರು ಶ್ರದ್ದಾಂಜಲಿ ಸಲ್ಲಿಸಿದರು. ಇದೇ ದಿನದಂದು ದೀಪಾ ಜೈಕುಮಾರ್ ಅವರು ರಾಜಕೀಯ ರಂಗ ಪ್ರವೇಶಿಸುವ ನಿರ್ಧಾರ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin