ಅರವಳಿಕೆ ನೀಡಿ ಸೆರೆ ಹಿಡಿದಿದ್ದ ಹುಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜ.17-ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಗುಂಡೆತ್ತೂರು ಗ್ರಾಮದಲ್ಲಿ ಅರವಳಿಕೆ ನೀಡಿ ಸೆರೆ ಹಿಡಿದಿದ್ದ ಹುಲಿ ಸಾವನ್ನಪ್ಪಿದೆ. ಇದರೊಂದಿಗೆ ತಾಯಿ ಹುಲಿಯಿಂದ ಬೇರ್ಪಟ್ಟ ಹುಲಿ ಮರಿಗಳು ಅನಾಥವಾಗಿವೆ. ಕಳೆದ ಡಿ.29ರಂದು ತಾಲ್ಲೂಕಿನ ಮಗ್ಗೇಗ್ರಾಮದಲ್ಲಿ ಹುಲಿ ಕಾರ್ಯಾಚರಣೆ ವೇಳೆ ಮೂರ್ತಿ ಎಂಬ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದರು. ಇದೇ ಹುಲಿ ಕಳೆದ ಒಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ 10ಕ್ಕೂ ಹೆಚ್ಚು ರಾಸುಗಳನ್ನು ಕೊಂದಿತ್ತು.  ಹೀಗಾಗಿ ಹುಲಿ ಹಿಡಿಯುವ ಕಾರ್ಯಾಚರಣೆಯನ್ನು ಬಂಡಿಪುರ ಅರಣ್ಯಾಧಿಕಾರಿಗಳು ನಡೆಸಿದ್ದರು. ನಿನ್ನೆ ಮತ್ತೆ ಬಾಳೆ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿ ಹಸುವನ್ನು ಕೊಂದಿತ್ತು. ಮಧ್ಯರಾತ್ರಿ ಹುಲಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಹಿಡಿಯಲಾಗಿತ್ತು. ಬೆಳಗ್ಗೆ ಮೃತಪಟ್ಟಿದೆ. ಹುಲಿ ಹಿಡಿಯಲು ಮೂರು ಬಾರಿ ಅರವಳಿಕೆ ನೀಡಿರುವುದೇ ಹುಲಿ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin