ಜಂಕ್‍ಫುಡ್-ಪ್ಯಾಕೇಜ್ ಆಹಾರದ ಮೇಲೆ ಅಧಿಕ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Junk-Food

ನವದೆಹಲಿ,ಜ.16-ಜನರ, ವಿಶೇಷವಾಗಿ ಮಕ್ಕಳ ಆರೋಗ್ಯಕ್ಕೆ ಮಾರಕವಾಗಿರುವ ಜಂಕ್‍ಫುಡ್, ಸಕ್ಕರೆ ಅಂಶ ಅಧಿಕವಿರುವ ಪೇಯ ಮತ್ತು ಪ್ಯಾಕೇಜ್ ಆಹಾರಗಳ ಮೇಲೆ ಮುಂಬರುವ ಬಜೆಟ್‍ನಲ್ಲಿ ಅಧಿಕ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.   ಈ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ವಿನಿಯೋಗಿಸುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.  ಸಕ್ಕರೆ ಅಂಶವಿರುವ ಜಂಕ್‍ಫುಡ್ ಮತ್ತು ಪ್ಯಾಕೇಜ್ ಆಹಾರಗಳಿಂದ ಜನರಿಗೆ ಸ್ಥೂಲಕಾಯ, ಡಯಾಬಿಟಿಸ್ ಮತ್ತು ಹೃದ್ರೋಗದಂತಹ ರೋಗಗಳು ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇಂತಹ ಆಹಾರ ಪದಾರ್ಥಗಳ ಮೇಲೆ ಅಧಿಕ ತೆರಿಗೆ ವಿಸಲು ಪರಿಶೀಲಿಸುತ್ತಿದೆ.

ಈ ಮೂಲಕ ಇಂಥ ಆಹಾರಗಳ ಮೇಲೆ ಕಡಿವಾಣ ಹಾಕಿ ಜನರ ಆರೋಗ್ಯವನ್ನು ರಕ್ಷಿಸುವುದು ಹಾಗೂ ಅಧಿಕ ತೆರಿಗೆ ವಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಸಂಪನ್ಮೂಲ ಹೆಚ್ಚಿಸುವ ಉದ್ದೇಶಗಳನ್ನು ಹೊಂದಲಾಗಿದೆ.  ಅಧಿಕ ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶವಿರುವ ಆಹಾರಗಳ ಮೇಲೆ ಹೆಚ್ಚುವರಿ ತೆರಿಗೆ ವಿಸಿ ಆ ಮೂಲಕ ಸಂಗ್ರಹವಾಗುವ ತೆರಿಗೆ ಹಣವನ್ನು ಆರೋಗ್ಯ ಕ್ಷೇತ್ರದ ಯೋಜನೆಗಳಿಗೆ ವಿನಿಯೋಗಿಸಲು ಚಿಂತಿಸಲಾಗಿದೆ.

ಬಜೆಟ್ ಪ್ರಸ್ತಾವನೆಗಳ ಕುರಿತು ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಕರೆದಿದ್ದ ಸಭೆಯಲ್ಲಿ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಇಂತಹ ಆಹಾರ ಪದಾರ್ಥಗಳಿಗೆ ಕಡಿವಾಣ ಹಾಕಲು ಮತ್ತು ತೆರಿಗೆ ವಿಸುವ ಶಿಫಾರಸು ಮಾಡಿದ್ದರು.  ಆರೋಗ್ಯ, ನೈರ್ಮಲ್ಯ ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳು ಸೇರಿದಂತೆ 11 ಸದಸ್ಯರ ಸಮೂಹವು ಇಂಥ ಆಹಾರಗಳಿಂದ ರೋಗಗಳು ಹೆಚ್ಚಾಗುತ್ತಿವೆ. ಆದ್ದರಿಂದ ಇವುಗಳ ಮೇಲೆ ತೆರಿಗೆ ವಿಸುವುದರಿಂದ ನಿಯಂತ್ರಣ ಸಾಸುವ ಜೊತೆಗೆ ಜನರ ಆರೋಗ್ಯವನ್ನು ರಕ್ಷಿಸಬಹುದು ಜೊತೆಗೆ ಸಂಗ್ರಹವಾಗುವ ಹಣವನ್ನು ಆರೋಗ್ಯ ಕ್ಷೇತ್ರಗಳಿಗೆ ಮೀಸಲಿಡಬಹುದು ಎಂದು ಶಿಫಾರಸು ಮಾಡಿದರು.

ಸಭೆಯ ನಂತರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಸಿ.ಕೆ.ಮಿಶ್ರ ಅವರು ಮೋದಿಯವರಿಗೆ ಪತ್ರ ಬರೆದು ಇದೇ ನಿಲುವನ್ನು ಪುನರುಚ್ಚರಿಸಿದ್ದಾರೆ.   ಈ ಎಲ್ಲ ಶಿಫಾರಸು ಮತ್ತು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಈ ಕುರಿತು ಅಂತಿಮ ನಿರ್ಧಾರ ಕೈಗೊಂಡು ಬಜೆಟ್‍ನಲ್ಲಿ ಇವುಗಳ ಮೇಲೆ ಅಕ ತೆರಿಗೆ ವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin