ಮಾಜಿ ಶಾಸಕ ಸೊಗಡು ಶಿವಣ್ಣ ನಿವಾಸದಲ್ಲಿ ನಾಳೆ ಬಿಜೆಪಿ ಅತೃಪ್ತರ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

eshwaraao

ಬೆಂಗಳೂರು,ಜ.17-ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಜೊತೆ ಭಿನ್ನಮತೀಯರು ಗುರುವಾರ ಸಭೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ಅತೃಪ್ತ ಬಣದವರು ಸಭೆ ನಡೆಸಲಿದ್ದಾರೆ.  ಮಾಜಿ ಶಾಸಕ ಸೊಗಡು ಶಿವಣ್ಣ ನಿವಾಸದಲ್ಲಿ ನಡೆಯಲಿರುವ ಸಭೆಗೆ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ , ರಘುನಾಥ್ ರಾವ್ ಮಲ್ಕಾಪುರೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯರಾದ ಭಾನುಪ್ರಕಾಶ್, ಸೋಮಣ್ಣ ಬೇವಿನಮರದ, ವಿಧಾನಪರಿಷತ್ ಮಾಜಿ ಸದಸ್ಯರಾದ ಡಾ.ಶಿವಯೋಗ ಸ್ವಾಮಿ, ಅಶ್ವಥ್ ನಾರಾಯಣ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ.

ಯಡಿಯೂರಪ್ಪನವರು ಗುರುವಾರ ನಡೆಸಲಿರುವ ಸಭೆಗೆ 10 ಮಂದಿ ಪ್ರಮುಖರು ಬರುವಂತೆ ಸೂಚನೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅತೃಪ್ತ ಬಣದವರು ಯಾವ ಯಾವ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂಬುದರ ಕುರಿತು ನಾಳೆ ಸಭೆ ಕರೆದಿದ್ದಾರೆ.  ರಾಜಕೀಯವಾಗಿ ಮಹತ್ವ ಪಡೆದುಕೊಂಡಿರುವ ನಾಳಿನ ಸಭೆಯು, ಗುರುವಾರ ಯಡಿಯೂರಪ್ಪನವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕೆಂಬುದರ ಬಗೆ ಹಾಗೂ ಅದೇ ರೀತಿ ಅವರು ರಾಜ್ಯಾಧ್ಯಕ್ಷರಾದ ಮೇಲೆ ಮಾಡುತ್ತಿರುವ ಪ್ರಮಾದಗಳ ಬಗ್ಗೆಯೂ ಚರ್ಚಿಸಲಿದೆ.  ಉನ್ನತ ಮೂಲಗಳ ಪ್ರಕಾರ ನಾಳೆ ನಡೆಯುತ್ತಿರುವ ಸಭೆಗೆ ಈಶ್ವರಪ್ಪ ಭಾಗವಹಿಸುತ್ತಿದ್ದು , ಯಡಿಯೂರಪ್ಪನವರ ಧೋರಣೆಗಳನ್ನು ಖಂಡಿಸಲಿದ್ದಾರೆ. ಯಾವ ಕಾರಣಕ್ಕಾಗಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲಾಯಿತು. ಅದರ ಉದ್ದೇಶವೇನು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸಲಿದ್ದಾರೆ.

ಯಡಿಯೂರಪ್ಪ ಧೋರಣೆಯಿಂದಾಗಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕುವ ಹಾಗೂ ಬೇಡದವರನ್ನು ತುಳಿಯುವ ಕೆಲಸ ಬಿಡಬೇಕು. ನನಗೆ ವೈಯಕ್ತಿಕವಾಗಿ ಬಿಎಸ್‍ವೈ ಮೇಲೆ ಯಾವುದೇ ಹಗೆತನವಿಲ್ಲ. ಆದರೆ ಸಂಸದರೊಬ್ಬರ ಮಾತುಕಟ್ಟಿಕೊಂಡು ನಿಷ್ಠಾವಂತರನ್ನು ಕಡೆಗಣಿಸುತ್ತಿದ್ದಾರೆ. ಇದು ಸರಿಯಾಬೇಕೆಂಬ ಅಭಿಪ್ರಾಯವನ್ನು ಹೊರ ಹಾಕಲಿದ್ದಾರೆ.  ಗುರುವಾರ ನಡೆಯಲಿರುವ ಸಭೆ ಸಾರ್ವಜನಿಕವಾಗಿ ಬಾರಿ ಮಹತ್ವ ಪಡೆದುಕೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin