ಸೆಲ್ಫೀ ಹುಚ್ಚಿನಿಂದ ಹಾರಿಹೋಯ್ತು ಇಬ್ಬರು ಬಾಲಕರ ಪ್ರಾಣ..!

ಈ ಸುದ್ದಿಯನ್ನು ಶೇರ್ ಮಾಡಿ

Selfie-01

ನವದೆಹಲಿ, ಜ.17-ಸೆಲ್ಫೀ ಗೀಳು ಅನೇಕರ ಪ್ರಾಣಕ್ಕೆ ಸಂಚಕಾರವಾಗಿ ಪರಿಣಮಿಸುತ್ತಿರುವಾಗಲೇ, ಸ್ಮಾರ್ಟ್‍ಫೋನ್‍ನಲ್ಲಿ ಸ್ವಯಂ ಫೋಟೋ ಗೀಳು ರಾಜಧಾನಿ ದೆಹಲಿಯಲ್ಲಿ ಇನ್ನಿಬ್ಬರು ಬಾಲಕರನ್ನು ಬಲಿ ತೆಗೆದುಕೊಂಡಿದೆ. ರೈಲ್ವೆ ಹಳಿ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ರಭಸವಾಗಿ ಬಂದ ರೈಲಿಗೆ ಸಿಕ್ಕಿ ಬಾಲಕಿಬ್ಬರು ಸಾವಿಗೀಡಾದ ಘಟನೆ ಪೂರ್ವ ದೆಹಲಿಯ ಆನಂದ್‍ವಿಹಾರ್‍ನಲ್ಲಿ ಸಂಭವಿಸಿದೆ.  ಯಶ್‍ಕುಮಾರ್ (16) ಮತ್ತು ಶುಭಂ(14) ಮೃತಪಟ್ಟ ದುರ್ದೈವಿಗಳು. ಯಶ್ ಮತ್ತು ಶುಭಂ ಇತರ ಐವರು ವಿದ್ಯಾರ್ಥಿ ಟ್ಯೂಷನ್ ಸಹಪಾಠಿಗಳಾಗಿದ್ದರು. ಇವರೆಲ್ಲರಿಗೂ ರೂಪದರ್ಶಿಯಾಗಬೇಕೆಂಬ ಹಂಬಲ. ಇದಕ್ಕಾಗಿ ಹಣ ಕ್ರೋಢೀಕರಿಸಿ ಒಂದು ಡಿಎಸ್‍ಎಲ್‍ಆರ್ ಕ್ಯಾಮೆರಾ ಸಹ ಖರೀದಿಸಿ ದಿನಕ್ಕೆ 400 ರೂ.ಗಳಂತೆ ಬಾಡಿಗೆಗೆ ನೀಡುತ್ತಿದ್ದರು.

ಜಾಹೀರಾತು ಕಂಪನಿಯೊಂದನ್ನು ಸಂಪರ್ಕಿಸಿದರ ಈ ಸ್ನೇಹಿತರು ತಮ್ಮ ಫೋಟೋ ಶೂಟ್ ಮಾಡಲು ನಿರ್ಧರಿಸಿದರು. ಅದರಂತೆ ರೈಲ್ವೆ ಹಳಿ ಹಿನ್ನೆಲೆಯಿರುವ ಸೆಲ್ಫೀ ಕ್ಲಿಕ್ಕಿಸಲು ಶನಿವಾರ ಆನಂದವಿಹಾರ್‍ನ ಎರಡು ರೈಲ್ವೆ ಟ್ರ್ಯಾಕ್‍ಗಳನ್ನು ಆಯ್ಕೆ ಮಾಡಿಕೊಂಡರು. ಅದರಂತೆ ಸೆಲ್ಫೀ ತೆಗೆಯುತ್ತಿದ್ದಾಗ ವೇಗವಾಗಿ ಬರುತ್ತಿದ್ದ ರೈಲು ಇವರ ಗಮನಕ್ಕೆ ಬರಲಿಲ್ಲ. ರೈಲು ಹತ್ತಿರಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಯಶ್ ಮತ್ತು ಶುಭಂ ಪಕ್ಕದ ಹಳಿಗೆ ಜಿಗಿದರು. ಆದರೆ ಅದೇ ಸಮಯಕ್ಕೆ ಎದುರು ದಿಕ್ಕಿನಿಂದ ಬರುತ್ತಿದ್ದ ಇನ್ನೊಂದು ರೈಲು ಇವರ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin