ಹಿಂದಿ ಭಾಷಿಗರಿಂದ ಅವಮಾನ : ರೈಲಿಗೆ ತಲೆಕೊಟ್ಟ ಕನ್ನಡಿಗ ಟ್ರೈನಿ ಎಸ್‍ಐ

ಈ ಸುದ್ದಿಯನ್ನು ಶೇರ್ ಮಾಡಿ

nizamuddin
ನವದೆಹಲಿ, ಜ.17- ಹಿಂದಿ ಭಾಷೆ ಬರುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ನಿಂದಿಸುತ್ತಿದ್ದರಿಂದ ಬೇಸತ್ತು ಕರ್ನಾಟಕದ ಟ್ರೈನಿ ಎಸ್‍ಐ ಒಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಿನ್ನೆ ನಡೆದಿದೆ.  ಕರ್ನಾಟಕ ರಾಜ್ಯದ ದಾವಣಗೆರೆಯ ತಿಪ್ಪೆಸ್ವಾಮಿ ಆತ್ಮಹತ್ಯೆಗೆ ಶರಣಾದ ಟ್ರೈನಿ ಎಸ್‍ಐ.  ಸಬ್‍ಇನ್ಸ್‍ಪೆಕ್ಟರ್ ತರಬೇತಿಗಾಗಿ ದೆಹಲಿಗೆ ತೆರಳಿದ್ದ ತಿಪ್ಪೇಸ್ವಾಮಿಗೆ ಹಿಂದಿ ಭಾಷೆ ಬರುತ್ತಿರಲಿಲ್ಲ. ಇದರಿಂದ ಹಿರಿಯ ಅಕಾರಿಗಳು ನಿಂದಿಸಿದ್ದರು. ಇದೇ ಕಾರಣಕ್ಕಾಗಿ ಅವರು ಖಿನ್ನರಾಗಿದ್ದರು ಎನ್ನಲಾಗಿದೆ.  ನಿನ್ನೆ ಬೆಳಗ್ಗೆ ಹಲ್ಲು ನೋವು ಎಂಬ ನೆಪವೊಡ್ಡಿ ತರಬೇತಿ ಶಿಬಿರದಿಂದ ಹೊರಗೆ ಬಂದಿದ್ದ ತಿಪ್ಪೆಸ್ವಾಮಿ ರಾಜಧಾನಿಯ ನಿಜಾಮುದ್ದೀನ್ ರೈಲು ನಿಲ್ದಾಣದ ಬಳಿ ಚಲಿಸುವ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಪ್ಪೆಸ್ವಾಮಿಯವರ ಶವವನ್ನು ಸಬ್ಜಿಮಂಡಿ ಶವಾಗಾರದಲ್ಲಿ ಇರಿಸಿ ಅವರ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಈ ಆತ್ಮಹತ್ಯೆ ಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಉನ್ನತಾಕಾರಿಗಳು ನಿರಾಕರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin