ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧರ್ಮ – ಕರುಣೆ ರಾರಾಜಿಸುತ್ತಿದೆ

ಈ ಸುದ್ದಿಯನ್ನು ಶೇರ್ ಮಾಡಿ

21

ಬೆಳಗಾವಿ,ಜ.18- ಧರ್ಮ ಮತ್ತು ಕರುಣೆ ರಾರಾಜಿಸುತ್ತಿರುವುದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎಂದು ಆನಂದ ಸಿದ್ದೀಪೀಠದ ಸಂಸ್ಥಾಪಕ ಹಾಗೂ ಜ್ಯೋತಿಷ್ಯ ಪ್ರವೀಣ ಮಹರ್ಷಿ ಆನಂದ ಗುರೂಜಿ ತಿಳಿಸಿದರು. ಶ್ರೀಕ್ಷೇತ್ರದಲ್ಲಿ ನಡೆದ ಧರ್ಮಸಭೈಯ ಅಧ್ಯಕ್ಷತೆ ವಹಿಸಿ ನಿನ್ನೆ ಸಂಜೆ ಮಾತನಾಡಿ ಸಾಮಾನ್ಯರಿಂದ ಆಗದ ಕೆಲಸಗಳು ಮಠಮಾನ್ಯಗಳಿಂದ ಆಗುತ್ತವೆ. ಶಿವಶಕ್ತಿ ಮತ್ತು ಜಗನ್ಮಾತೆಯ ವರಪ್ರಸಾದ ಮತ್ತು ದೈವಿ ಶಕ್ತಿಸ್ಥಳಗಳಿಂದ ಜಗತ್ತಿನ ಸಾಮಾಜಿಕ ಸುಧಾರಣೆ ಆಗುತ್ತದೆ ಎಂದರು. ಸಾಧು, ಸಂತರು, ಶ್ರಮಿಕರು ಮತ್ತು ರೈತರಿಂದ ಆಧುನಿಕ ಜಗತ್ತಿನಲ್ಲಿ ಧರ್ಮ ಮತ್ತು ಕರುಣೆ ಕಾಯ್ದುಕೊಂಡು ಬಂದಿದೆ. ಸುಖ ಸಮೃದ್ಧಿಯಲ್ಲಿ ನಾವು ಮನೆಯಲ್ಲಿ ಕುಳಿತಿದ್ದಾಗ ಗಡಿಭಾಗದಲ್ಲಿ ನಮ್ಮನ್ನು ಸೈನಿಕರು ಶ್ರಮದಿಂದ ಕಾಯುತ್ತಾರೆ.

ನಮ್ಮನ್ನು ಪ್ರತ್ಯಕ್ಷ ಪರೋಕ್ಷವಾಗಿ ಕಾಯ್ದು ಕಾಪಾಡುವ ಗುರುಗಳು, ಸೈನಿಕರು, ಆಡಳಿತಾಂಗಗಳು ದೇವರ ರೂಪ ಎಂದರು. ಧರ್ಮ ಎಲ್ಲಿ ರಾರಾಜಿಸುತ್ತಿರುವುದು ಎಲ್ಲಿ ಎಂದರೆ ಉತ್ತರ ಕರ್ನಾಟಕದಲ್ಲಿ ಜಿಲ್ಲೆಗಳಲ್ಲಿ, ಹಿಂದೂ ಸನಾತನ ಧರ್ಮದ ಆಲಯ ಉತ್ತರ ಕರ್ನಾಟಕವಾಗಿದೆ ಎಂದರು.ಜ್ಯೋತಿಷಿ ಬೈಲಹೊಂಗಲದ ಮಹಾಂತೇಷ ಆರಾಧ್ಯಮಠ, ಸಂಪಗಾವಿಯ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಸುಣದೊಳಿಯ ಶಿವಾನಂದ ಸ್ವಾಮೀಜಿ, ಕಾನಟ್ಟಿಯ ಬಸವಾ ನಂದ ಮಹಾಸ್ವಾಮೀಜಿ, ಬೈಲಹೊಂಗಲದ ಬಸಯ್ಯಶಾಸ್ತ್ರೀ ಹಾಗೂ ಶಿವಕುಮಾರ ಶಾಸ್ತ್ರೀ ಇನ್ನಿತರರು ಭಾಗವಹಿಸಿದ್ದರು.

ಸಮೀಪದ ಭೂತರಾಮನಹಟ್ಟಿ ಶ್ರೀಕ್ಷೇತ್ರ ಮುಕ್ತಿಮಠದಲ್ಲಿ ನಡೆದಿರುವ ಜಾತ್ರೆಯ ಅಂಗವಾಗಿ ಶ್ರೀ ಶಿವಸಿದ್ದ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಧರ್ಮಸಭೆ, ಬೃಹತ್ ಹೋಮ ಹವನ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ಕಿಕ್ಕಿರಿದು ತುಂಬಿದ್ದ ಸುಮಂಗಲೆಯರು ಹಾಗೂ ಭಕ್ತವೃಂದದ ಮಧ್ಯೆಯೆ ನಡೆದವು.  ದಿವ್ಯಸಾನಿದ್ಯ ವಹಿಸಿದ್ದ ಬೆಂಗಳೂರಿನ ಆನಂದ ಸಿದ್ದಿಪೀಠದ ಸಂಸ್ಥಾಪಕ ಜ್ಯೋತಿಷ್ಯಪ್ರವೀಣ ಮಹರ್ಷಿ ಆನಂದ ಗುರೂಜಿ ಅವರ ಆನೆಅಂಬಾರಿ ಉತ್ಸವ ಹೊಸವಂಟಮುರಿ ಗ್ರಾಮದಿಂದ ಶ್ರೀಕ್ಷೇತ್ರದವರೆಗೆ ಬೆಳಿಗ್ಗೆ ನಡೆಯಿತು. ಮುಕ್ತಿಮಠದಲ್ಲಿ ಮಧ್ಯಾಹ್ನದಿಂದ ಸಂಜೆವೆರೆಗೆ ಗಜಪೂಜೆ, ಮುಕ್ತಾಂಬಿಕಾ ಅಮ್ಮನವರಿಗೆ ಕುಂಭಾಭಿಷೇಕ, ಪೂರ್ಣಾಹುತಿ ಯಜ್ಞ, ಸುಹಾಸಿನಿ ಪೂಜೆ ಹಾಗೂ ಸಂಜೆ ಧರ್ಮ ಸಭೆ, ಭರತನಾಟ್ಯ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆದವು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin