‘ಗುಬ್ಬಿ ಹುಡುಗಿಯನ್ನು ಕೆಣಕಿದರೆ ಇದೇ ಗತಿ’ ಎಂದು ಅಮಾನುಷವಾಗಿ ವರ್ತಿಸಿದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Gubbi-Boy

ತುಮಕೂರು, ಜ. 18 : ಯುವತಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ, ಚಪ್ಪಲಿ ಹಾರ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದಕ್ಕೆ 8 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಲಿತ ಯುವಕನನ್ನು ಹಿಂಸಿಸಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರತಿಭಟನೆಗಳೂ ಕೂಡ ಆರಂಭವಾಗಿತ್ತು. ಜಾಗೃತರಾದ ಆರೋಪಿಗಳು ಬೆಂಗಳೂರಲ್ಲಿ ತಲೆ ಮರೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಚುರುಕು ಕಾರ್ಯಾಚರಣೆಯನ್ನು ನಡೆಸಿದ ಪೊಲೀಸರು ತುಮಕೂರಿನ ರಿಂಗ್ ರೋಡ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊರಟಗೆರೆ ಠಾಣೆಯಲ್ಲಿ ವಿಚಾರಣೆ ಮುಂದುವರೆದಿದೆ.

ಯುವತಿಯನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಯುವಕನನ್ನು ತೋಟದ ಮನೆಯೊಂದಕ್ಕೆ ಕರೆಸಿಕೊಂಡು ಆತನನ್ನು ನಗ್ನಗೊಳಿಸಿ , ಚಪ್ಪಲಿ ಹಾರ ಹಾಕಿ ಮನಬಂದಂತೆ ಥಳಿಸಿ, ‘ಗುಬ್ಬಿ ಹುಡುಗಿಯನ್ನು ಕೆಣಕಿದರೆ ಇದೇ ಗತಿ’ ಎಂದು ಯುವಕನಿಂದಲೇ ಬರೆಸಿ ಆತನ ಕೊರಳಿಗೆ ತಗಲು ಹಾಕಿ ಅಮಾನುಷವಾಗಿ ವರ್ತಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin