ಜ.20ರಂದು ಚಕ್ರವರ್ತಿ ಚಂದ್ರಚೂಡ್ ಅವರ ‘ಮೈಲುತುತ್ತ’ ಪದ್ಯಗಳಿಗೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Chandrachud

ಬೆಂಗಳೂರು, ಜ.18– ಚಕ್ರವರ್ತಿ ಚಂದ್ರಚೂಡ್ ಅವರ ಮೈಲುತುತ್ತ ಪದ್ಯಗಳಿಗೆ ಬಿಡುಗಡೆ ಕಾರ್ಯಕ್ರಮ ಇದೇ 20ರಂದು ನಗರದ ಮಲ್ಲೇಶ್ವರಂನ ದೋಬಿಘಾಟ್‍ನಲ್ಲಿ ನಡೆಯಲಿದೆ.
ಪ್ರಸಿದ್ಧ ಕಲಾವಿದ ಜಾನ್ ದೇವರಾಜ್ ಮತ್ತು ಜಂಬೆಬಾಲು ಅವರ ಇಂಡಿಯನ್ ಫೋಕ್ ಬ್ಯಾಂಡ್ ತಂಡದ ಸಂಗೀತ ಕಾರ್ಯಕ್ರಮದೊಂದಿಗೆ ಈ ಕಾರ್ಯಕ್ರಮ ಸಂಜೆ 5 ಗಂಟೆಗೆ ಆರಂಭಗೊಳ್ಳಲಿದೆ.  ನಾಡಿನ ಮೊದಲ ಮಹಿಳಾ ವೀರಬಾಹು ಅನುಸೂಯಾ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿಸದ್ದಾರೆ. ಖ್ಯಾತ ಚಲನಚಿತ್ರ ನಟ ಧನಂಜಯ್ ಅವರು ಮೈಲುತುತ್ತ ಕೃತಿ ಬಿಡುಗಡೆ ಮಾಡಲಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಹಾಗೂ ಕಲಾವಿದ ಎಂ.ಎಸ್.ಜಹಂಗೀರ್ ಕೃತಿ ಕುರಿತು ಮಾತನಾಡಲಿದ್ದು, ಹಗರಿ ಬೊಮ್ಮನಹಳ್ಳಿಯ ಸುಯೋಧನ ಪ್ರಕಾಶಕರಾದ ಸಾಹಿತಿ ಸುಧಾ ಚಿದಾನಂದಗೌಡ ಉಪಸ್ಥಿತರಿರುತ್ತಾರೆ.  ಸಿ.ಮುನಿ ಹಾಗೂ ಪದ್ಮ ಪುಟ್ಟರಾಜು ಅವರನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಸಾಹಿತಿ ಬೋಳುವಾರ ಮಹಮದ್ ಕುಂಞ, ನಿರ್ದೇಶಕ ಬಿ.ಸುರೇಶ್ ಅಭಿನಂದಿಸಲಿದ್ದಾರೆ ಎಂದು ದರ್ವೇಶ್ ಚೌಕಿಯ ವಿ.ಎಂ.ಮಂಜುನಾಥ್ ಚಲ್ಲಂ ಆಡ್ಲಳ್ಳಿ ಅವರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin