ನೈಜೀರಿಯಾ ವಾಯುಪಡೆ ಮಾಡಿದ ಎಡವಟ್ಟಿಗೆ 116 ಜನ ನಿರಾಶ್ರಿತರು ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

100-Killed ಮೈದುಗುರಿ, ನೈಜೀರಿಯಾ, ಜ.18-ಅತ್ಯುಗ್ರ ಬೋಕೊ ಹರಾಮ್ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ನೈಜೀರಿಯಾ ವಾಯುಪಡೆ ಮಾಡಿದ ಎಡವಟ್ಟಿನಿಂದಾಗಿ ಸತ್ತವರ ಸಂಖ್ಯೆ 116ಕ್ಕೇರಿದೆ. ತನ್ನವರೇ ಆದ ನಿರಾಶ್ರಿತರ ಶಿಬಿರದ ಮೇಲೆ ಆಕಸ್ಮಿಕ ಬಾಂಬ್ ದಾಳಿ ನಡೆಸಿದ ಪರಿಣಾಮವಾಗಿ ಈ ಘೋರ ದುರಂತ ಸಂಭವಿಸಿದೆ. ಈ ದಾಳಿಯಲ್ಲಿ ಅನೇಕರು ತೀವ್ರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

100-Killed-1

ನೈಜೀರಿಯಾ ವಾಯುಪಡೆ ಯುದ್ಧ ವಿಮಾನಗಳು ಬೋರ್ನೊ ಪ್ರಾಂತ್ಯದಲ್ಲಿರುವ ನಿರಾಶ್ರಿರತ ಶಿಬಿರದ ಮೇಲೆ ಅಚಾನಕ್ಕಾಗಿ ಬಾಂಬ್ ದಾಳಿಗಳನ್ನು ನಡೆಸಿತು. ಈ ಅಚಾತುರ್ಯದಿಂದ ಮಕ್ಕಳು, ಮಹಿಳೆಯರು ಮತ್ತು ಪರಿಹಾರ ಕಾರ್ಯಕರ್ತರೂ ಸೇರಿದಂತೆ 116ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಮಿಲಿಟರಿ ಕಮ್ಯಾಂಡರ್ ಮೇಜರ್ ಜನರಲ್ ಲಕ್ಕಿ ಇರಾಬೊರ್ ಖಚಿತಪಡಿಸಿದ್ದಾರೆ.  ಕ್ಯಾಮರೂನ್ ಡಿ ಬಳಗದಲ್ಲಿರುವ ರಾನ್ ಪಟ್ಟಣದ ಈಶಾನ್ಯ ದಿಕ್ಕಿನಲ್ಲಿ ಈ ದಾಳಿ ನಡೆದಿದೆ. ಗಾಯಾಳುಗಳನ್ನು ಸುತ್ತಮತ್ತಲ ಪ್ರದೇಶದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin