ವಿಮಾನ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ : ಸಿಬ್ಬಂದಿ ಶವ ತೆಗೆದು ಪರೀಕ್ಷಿಸಲು ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Pakistan-Plane

ಇಸ್ಲಾಮಾಬಾದ್, ಜ.18-ಪಾಕಿಸ್ತಾನದ ಅಬೋಟಾಬಾದ್ ಬಳಿ ಕಳೆದ ತಿಂಗಳು 48 ಪ್ರಯಾಣಿಕರನ್ನು ಬಲಿತೆಗೆದುಕೊಂಡ ವಿಮಾನ ದುರಂತ ಪ್ರಕರಣಕ್ಕೀಗ ಹೊರ ತಿರುವು ಲಭಿಸಿದೆ. ವಿಮಾನ ಸಿಬ್ಬಂದಿಯ ಮೃತದೇಹಗಳನ್ನು ಸಮಾಧಿಯಿಂದ ಹೊರತೆಗೆದು ಘಟನೆಗೆ ಕಾರಣಗಳನ್ನು ಪತ್ತೆ ಮಾಡಲು ಪಾಕಿಸ್ತಾನಿ ಅಧಿಕಾರಿಗಳು ಉದ್ದೇಶಿಸಿದ್ದಾರೆ. ಇದೊಂದು ಅಸಾಧಾರಣ ವಿದ್ಯಮಾನವಾಗಿದೆ.  ಈ ಭೀಕರ ವಿಮಾನ ಅಪಘಾತ ಸಂಭವಿಸುವುದಕ್ಕೂ ಮುನ್ನ ಸಿಬ್ಬಂದಿಯ ಪೈಕಿ ಯಾರಾದರೂ ಮಾದಕವಸ್ತು ನಶೆಯಲ್ಲಿದ್ದರೆ ಎಂಬುದನ್ನು ತಿಳಿಯುವುದು ಇದರ ಉದ್ದೇಶವಾಗಿದೆ.

ಚಿತ್ರಾಲ್‍ನಿಂದ ಇಸ್ಲಾಮಾಬಾದ್‍ಗೆ ಹಾರುತ್ತಿದ್ದ ಪಾಕಿಸ್ತಾನ್ ಇಂಟರ್‍ನ್ಯಾಷನಲ್ ಏರ್‍ಲೈನ್ಸ್ (ಪಿಐಎ) ಸಂಸ್ಥೆಯ ಪಿಕೆ-661 ವಿಮಾನವು ಅಬೋಟಾಬಾದ್ ಬಳಿ ಪತನಗೊಂಡು ಸಿಬ್ಬಂದಿ ಸೇರಿದಂತೆ ಒಟ್ಟು 48 ಪ್ರಯಾಣಿಕರು ದುರಂತ ಸಾವಿಗೀಡಾಗಿದ್ದರು. ಈ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪಾಕಿಸ್ತಾನ ಸರ್ಕಾರ ಆದೇಶ ನೀಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin