ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಇಡೀ ಲೋಕವು ಹೊಗಳುತ್ತಿರಲು ಮಹಾತ್ಮನು ತನ್ನ ಗುಣಗಳನ್ನು ಹೇಳಿಕೊಳ್ಳಬೇಕಾಗಿರುವುದಿಲ್ಲ. ಆದರೆ ನೀಚನ ಗುಣಗಳನ್ನು ಹೇಳುವವರೇ ಇಲ್ಲ. ಆದು ದರಿಂದ ಅವನು ತಾನೇ ತನ್ನ ಗುಣಗಳನ್ನು ಬೇರೆ ದಾರಿ ಯಿಲ್ಲದೆ ಹೇಳಿಕೊಳ್ಳಬೇಕಾಗುತ್ತದೆ. – ಶಿಶುಪಾಲವಧ

Rashi

ಪಂಚಾಂಗ : ಗುರುವಾರ , 19.01.2017

ಸೂರ್ಯ ಉದಯ  ಬೆ.06.46 /ಸೂರ್ಯ ಅಸ್ತ  ಸಂ.06.15
ಚಂದ್ರ ಅಸ್ತ ಬೆ.11.47 / ಚಂದ್ರ ಉದಯ ರಾ.12.21
ದುರ್ಮುಖಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ಸಪ್ತಮಿ  (ಮ.02.38)
ನಕ್ಷತ್ರ: ಚಿತ್ತಾ  (ರಾ.05.11) / ಯೋಗ: ಸುಕರ್ಮ  (ಬೆ.11.59) / ಕರಣ: ಭವ-ಬಾಲವ (ಮ.02.38-ರಾ.03.43)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 06

ರಾಶಿ ಭವಿಷ್ಯ :

ಮೇಷ : ಆಗಾಗ ಮಾನಸಿಕ ಅಸ್ಥಿರತೆ ಕಾಡಬಹುದು, ಗೃಹ ದಲ್ಲಿ ಮಕ್ಕಳೊಂದಿಗೆ ಅನಾವಶ್ಯಕ ಕಲಹ ಉಂಟಾಗಬಹುದು
ವೃಷಭ : ಹಿಡಿದ ಕೆಲಸ-ಕಾರ್ಯಗಳಲ್ಲಿ ಅಡೆತಡೆಗಳು ತೋರಿಬಂದು ವಿಳಂಬವಾಗಲಿವೆ, ಸಂತಾನದ ಬಗ್ಗೆ ಜಾಗ್ರತೆ
ಮಿಥುನ: ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿಬರಲಿವೆ
ಕಟಕ : ವ್ಯಾಪಾರ- ವ್ಯವಹಾರ ಗಳಲ್ಲಿ ಚೇತರಿಕೆ ಕಂಡುಬರುತ್ತದೆ
ಸಿಂಹ: ಶತ್ರುಗಳು ಪಲಾಯನಗೊಳ್ಳು ವರು, ಸಾಂಸಾರಿಕವಾಗಿ ನೆಮ್ಮದಿ ಸಿಗಲಿದೆ
ಕನ್ಯಾ: ಆಗಾಗ ಧನ ಸಂಗ್ರಹಕ್ಕೆ ಅನುಕೂಲಕರ ವಾತಾವರಣ
ತುಲಾ: ಅವಿವಾಹಿತರಿಗೆ ವಿವಾಹ ಯೋಗ್ಯ ಸಂಬಂಧಗಳು ಪೂರಕವಾಗಲಿವೆ
ವೃಶ್ಚಿಕ : ಕಾರ್ಯರಂಗದಲ್ಲಿ ಶತ್ರುಗಳ ಉಪಟಳ ಹೆಚ್ಚಲಿದೆ
ಧನುಸ್ಸು: ಸಾಂಸಾರಿಕವಾಗಿ ಖರ್ಚು ಹೆಚ್ಚಲಿದೆ, ಕಲಹಕ್ಕೆ ದಾರಿ ಮಾಡಿಕೊಳ್ಳಬೇಡಿ
ಮಕರ: ವಾದ-ವಿವಾದಗಳಿಂದ ದೂರವಿರಬೇಕು, ಅಧಿಕ ಖರ್ಚಿನಿಂದ ಆತಂಕಕ್ಕೊಳಗಾಗುವಿರಿ
ಕುಂಭ: ಗ್ರಹಿಸಿದ ಕೆಲಸ-ಕಾರ್ಯಗಳು ನೆರವೇರುತ್ತವೆ
ಮೀನ: ಧನಾದಾಯ ಉತ್ತಮ, ಎಲ್ಲದರಲ್ಲೂ ಸಮರ್ಥರಾಗುವಿರಿ, ನವದಂಪತಿಗಳಿಗೆ ಸಂತಾನಭಾಗ್ಯ

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin