ಏಕದಿನ ಸರಣಿಯ 2ನೇ ಪಂದ್ಯ , ಭಾರತಕ್ಕೆ ಮತ್ತೊಂದು ರೋಚಕ ಜಯ, ಸರಣಿ ಕೈವಶ

ಈ ಸುದ್ದಿಯನ್ನು ಶೇರ್ ಮಾಡಿ

Dhoni

ಕಟಕ್. ಜ.19- ಇಲ್ಲಿನ ಬಾರಬತಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಭಾರತ ಮತ್ತೊಂದು ರೋಚಕ ಗೆಲುವು ದಾಖಲಿಸಿದೆ. ಇಂಗ್ಲೆಂಡ್’ನ್ನು 15 ರನ್ ಗಳಿಂದ ಪರಾಭವಗೊಳಿಸಿದ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಯುವರಾಜ್ ಸಿಂಗ್(150) ಹಾಗೂ ಮಹೇಂದ್ರ ಸಿಂಗ್ ಧೋನಿ(134) ಶತಕಗಳ ಜೊತೆಯಾಟದಿಂದ 381 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 366 ಗಳಿಸಿ ಕಠಿಣ ಹೋರಾಟ ಮಾಡಿ ಕೊನೆಯಲ್ಲಿ ಸೋಲೊಪ್ಪಿಕೊಂಡಿತು. ಈ ಮೂಲಕ ವಿರಾಟ್ ಕೊಹ್ಲಿ ನಾಯಕನಾದಮೇಲೆ ಭಾರತ ಸತತ 2 ಏಕದಿನ ಪಂದ್ಯಗಳನ್ನು ಗೆದ್ದಂತಾಗಿದೆ.

ಸಂಕ್ಷಿಪ್ತ ಸ್ಕೋರ್ : 

ಭಾರತ  :  381/6 (50.0 ov)
ಇಂಗ್ಲೆಂಡ್ ; 366/8 (50.0 ov)

> ಯುವಿ-ಧೋನಿ ಸೂಪರ್ ಸೆಂಚುರಿಗೆ ಆಂಗ್ಲರು ಸುಸ್ತು

ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಹಾಗೂ ಅಲ್‍ರೌಂಡರ್ ಯುವರಾಜ್ ಸಿಂಗ್ ಅಮೋಘ ಶತಕ ದಾಖಲಿಸಿದ್ದಾರೆ. ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡಯುತ್ತಿರುವ ಪಂದ್ಯದಲ್ಲಿ ಯುವಿ ಹಾಗೂ ಮಾಹಿ ಅವರ ಸ್ಫೋಟಕ ಶತಕ ಬಾರಿಸಿದ್ದರು. ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ಯುವರಾಜ್ ಸಿಂಗ್ ಹಾಗೂ ಧೋನಿ ಅವರು ಎಚ್ಚರಿಕೆ ಆಟವಾಡಿ ತಂಡದ ರಕ್ಷಣೆಗೆ ನಿಂತರು. ಆರಂಭದಲ್ಲೇ ನಿಧಾನ ಆಟಕ್ಕೆ ಮೋರೆ ಹೋದ ಇಬ್ಬರು ಆಟಗಾರರ ನಂತರ ಸಿಡಿದು ನಿಂತರು.

ಮಾಹಿ ಹಾಗೂ ಯುವಿ ಆಟಕ್ಕೆ ಇಂಗ್ಲೆಂಡ್ ಬೌಲರ್‍ಗಳು ದಂಗಾದರು. ಮೊದಲು ಯುವಿ ಆಕರ್ಷಕ ಶತಕ ಸಿಡಿಸಿದರೆ ಬಳಿಕ ಮಾಹಿ ಶತಕ ದಾಖಲಿಸಿದರು. ಇಬ್ಬರು ಆಟವನ್ನು ಕ್ರೀಡಾಂಣದಲ್ಲಿದ್ದ ಅಭಿಮಾನಿಗಳು ಕಣ್ತುಂಬಿಸಿಕೊಂಡರು. ಬೌಂಡರಿ, ಸಿಕ್ಸರ್ ಸುರುಮಳೆಗೈದರು. 4ನೇ ವಿಕೆಟ್‍ನಲ್ಲಿ 256 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. 127 ಎಸೆತಗಳನ್ನು ಎದುರಿಸಿದ ಯುವಿ 21 ಬೌಂಡರಿ, 3 ಸಿಕ್ಸರ್ ಸಹಿತ 150 ರನ್ ಕಲೆ ಹಾಕಿ ವೋಗ್ಸ್ ಬೌಲಿಂಗ್‍ನಲ್ಲಿ ಔಟ್ ಆದರು. ಯುವಿ ಸಾಥ್ ನೀಡಿದ ಧೋನಿ ಅಬ್ಬರದ ಶತಕ ದಾಖಲಿಸಿದರು.

ಸಚಿನ್ ದಾಖಲೆ ಸರಿಗಟ್ಟಿದ ಧೋನಿ :

ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರು ದಾಖಲೆಯೊಂದನ್ನು ಮುರಿದು, ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಎಂಎಸ್ ಧೋನಿ ಅವರು ಭಾರತದಲ್ಲಿ 4,000 ರನ್ ಗಳಿಸಿದ್ದು, ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಮೂರನೇ ಸ್ಥಾನದಲ್ಲಿದ್ದು, ಭಾರತದ ಪಿಚ್ ಗಳಲ್ಲಿ ಒಟ್ಟು 3406 ಏಕದಿನ ರನ್ ಗಳನ್ನು ಗಳಿಸಿದ್ದಾರೆ. ಧೋನಿ ಅವರು ನಾಯಕತ್ವ ತೊರೆದ ಬಳಿಕ ಶತಕ ಬಾರಿಸಿದರು. ಶತಕ ಗಳಿಕೆಗೂ ಮುನ್ನ ಲಿಯಾಮ್ ಪ್ಲಂಕೆಟ್ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ 4000 ರನ್ ಗಡಿ ದಾಟಿದರು.
284 ಏಕದಿನ ಪಂದ್ಯಗಳಿಂದ 9,216 ಪ್ಲಸ್ ರನ್ ಗಳಿಸಿರುವ ಧೋನಿ ಅವರಿಗಿಂತ ತೆಂಡೂಲ್ಕರ್ (18,426 ರನ್), ಸೌರವ್ ಗಂಗೂಲಿ(11,221), ದ್ರಾವಿಡ್ (10,768), ಮೊಹಮ್ಮದ್ ಅಜರುದ್ದೀನ್ (9378) ಮುಂದಿದ್ದಾರೆ.

> 5 ವರ್ಷಗಳ ನಂತರ ಸೆಂಚುಸಿ ಸಿಡಿಸಿದ ಯುವರಾಜ್ ಸಿಂಗ್

ಕಳೆದ ಮೂರು ವರ್ಷಗಳಿಂದ ತಂಡಕ್ಕೆ ಮರಳಲು ಹರಸಾಹಸಪಡುತ್ತಿದ್ದ ಯುವರಾಜ್ ಸಿಂಗ್, ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದರು. ಶತಕಕ್ಕೆ ಕೇವಲ ಒಂದು ರನ್ ಬೇಕಿದ್ದ ಸಂದರ್ಭದಲ್ಲಿ ಯುವಿ ಪ್ಲಂಕೆಟ್ ಬೌಲಿಂಗ್‍ನಲ್ಲಿ ಒಂದು ರನ್ ಕಲೆ ಹಾಕಿ ಶತಕ ಪೂರೈಸಿದರು. ಇದರೊಂದಿಗೆ ಯುವಿ ಭಾವೋಗ್ವೇದಗೊಂಡ ಮೈದಾನದಲ್ಲಿ ಆಟದ ವೈಭವವನ್ನು ಮೆಲುಕು ಹಾಕಿದರು. ರಣಜಿಯಲ್ಲಿ ಅತ್ಯುತ್ತಮ ಆಟವಾಡಿ ಇಂಗ್ಲೆಂಡ್ ವಿರುದ್ಧ ಸರಣಿಗೆ ಆಯ್ಕೆಯಾದ ಯುವಿ 2ನೇ ಪಂದ್ಯದಲ್ಲಿ 14ನೇ ಶತಕ ದಾಖಲಿಸಿದ್ದಾರೆ.

ಮೂರು ವರ್ಷಗಳ ನಂತರ ಮತ್ತೆ ತಂಡದಲ್ಲಿ ಕಾಣಿಸಿಕೊಂಡ ಯುವರಾಜ್ ಬ್ಯಾಟಿಂಗ್‍ಗೆ ಕಾತುತರಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 15ರನ್‍ಗಳಿಸಿ ನಿರಾಸೆ ಮೂಡಿಸಿದ್ದರು. ಆದರೆ ಇಂದು ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು. ದೀರ್ಘ ಕಾಲದ ನಂತರ ಅಂದರೆ 5 ವರ್ಷ, 9 ತಿಂಗಳು, 30 ದಿನಗಳ ಬಳಿಕ ಯುವಿ 14ನೇ ಶತಕ ಬಾರಿಸಿ ಸಂಭ್ರಮಿಸಿದರು. ಆರಂಭದಲ್ಲೇ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸಮನ್‍ಗಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಯುವಿ ಸಮಯೋಚಿತ್ತ ಆಟವಾಡಿ ತಂಡದ ಬೃಹತ್ ಮೊತ್ತ ದಾಖಲಿಸಲು ನೆರವಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin