ಚೀನಾ ಸೇನೆ 48 ಗಂಟೆಯೊಳಗೆ ದೆಹಲಿಗೆ ನುಗ್ಗುತ್ತಂತೆ…!

ಈ ಸುದ್ದಿಯನ್ನು ಶೇರ್ ಮಾಡಿ

China-troops

ನವದೆಹಲಿ, ಜ.19-ಚೀನಾದ ಮೋಟಾರು ವಾಹನ ಸೇನೆಯು ಕೇವಲ 48 ಗಂಟೆಗಳ ಒಳಗೆ ರಾಜಧಾನಿ ದೆಹಲಿಯನ್ನು ತಲುಪಬಲ್ಲದು ಎಂದು ಚೀನಿ ಸರ್ಕಾರಿ ಟಿವಿ ವಾಹಿನಿಯೊಂದು ಹೇಳಿಕೊಂಡಿದೆ. ಆದರೆ ಚೀನಾ ಮಾಧ್ಯಮದ ಈ ವಿವಾದಾತ್ಮಕ ಹೇಳಿಕೆಗೆ ಟ್ವೀಟರ್‍ನಲ್ಲಿ ವ್ಯಾಪಕ ಆಕ್ರೋಶ, ಟೀಕೆ ಮತ್ತು ವ್ಯಂಗ್ಯ ವ್ಯಕ್ತವಾಗಿದೆ.  ಸದಾ ವೈರತ್ವ ಮನೋಭಾವಕ್ಕೆ ಹೆಸರುವಾಸಿಯಾಗಿರುವ ಚೀನಾದ ಟಿವಿ ವಾಹಿನಿಯ ಈ ಹೇಳಿಕೆಯನ್ನು ಭಾರತ ಹಾಸ್ಯಾಸ್ಪದೆಂದು ಪರಿಗಣಿಸಿದೆ. ಇದಕ್ಕೆ ಕಾರಣವೂ ಇದೆ ಭಾರತ-ಚೀನಾ ನಡುವಣ ಭೌಗೋಳಿಕ ಸ್ವರೂಪವು ಅತ್ಯಂತ ದುರ್ಗಮ ರೀತಿಯದ್ದಾಗಿದೆ. ಅಲ್ಲದೇ ಸರ್ವಶಕ್ತ ಭಾರತೀಯ ಸೇನೆಯನ್ನು ಎದುರಿಸಿಕೊಂಡು ಮುನ್ನುಗ್ಗುವುದು ಚೀನಾಗೆ ಅಸಾಧ್ಯ. 48 ಗಂಟೆಗಳ ಒಳಗೆ ಚೀನಾದ ಮೋಟಾರು ವಾಹನ ಸೇನೆಯು ದೆಹಲಿಯನ್ನು ತಲುಪುವುದಕ್ಕೆ ಸಾಧ್ಯವೇ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಭಾರತದ ಸೌಮ್ಯ ಸ್ವಭಾವದ ಜನರು ಚೀನಾದ ಈ ಹೇಳಿಕೆಯನ್ನು ಗಂಭೀರವಾಗಿ ಅಥವಾ ಹಗುರವಾಗಿ ಸ್ವೀಕರಿಸಿಲ್ಲ. ಚೀನಿ ಸೇನೆ ಭಾರತದ ರಾಜಧಾನಿ ದೆಹಲಿಯನ್ನು ಕೇವಲ 48 ತಾಸುಗಳ ಒಳಗೆ ತಲುಪಬಲ್ಲದು ಎಂಬ ಹೇಳಿಕೆಗೆ ತೀವ್ರ ಆಕ್ರೋಶ, ಟೀಕೆ-ಟಿಪ್ಪಣೆ ಮತ್ತು ವ್ಯಂಗ್ಯಗಳೂ ಕೇಳಿಬಂದಿವೆ. ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿರುವಾಗಿಲೇ ಚೀನಾ ಮಾಧ್ಯಮದ ಈ ಹೇಳಿಕೆ ಭಾರತೀಯರನ್ನು ಕೆರಳಿಸಿದೆ. ಚೀನಾ ದೆಹಲಿಯೊಳಗೆ 48 ಗಂಟೆಗಳಲ್ಲಿ ನುಗ್ಗಲು ಸಾಧ್ಯವಾಗುತ್ತದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಭಾರತದ ಅಗ್ನಿ-5 ಕ್ಷಿಪಣಿ ದಾಳಿ ನಡೆಸಿದರೆ ಚೀನಾ ಉತ್ತರ ಭಾಗ ಭೂಪಟದಲ್ಲಿ ಇತ್ತು ಎಂಬುದೇ ಮರೆತು ಹೋಗುವಂತಾಗುತ್ತದೆ ಎಂದು ದೇಶಾಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಗಡಿಯಲ್ಲಿ ಚೀನಾ ಸೇನೆ ನಡೆಸುತ್ತಿರುವ ಅತಿಕ್ರಮಣದ ಪ್ರಕರಣಗಳು, ಪಾಕಿಸ್ತಾನಕ್ಕೆ ಕುಮ್ಮಕ್ಕು ನೀಡುತ್ತಿರುವ ಇಬ್ಬಗೆ ನೀತಿ, ಪರಮಾಣು ಪೂರೈಕೆದಾರರ ಸಮೂಹಕ್ಕೆ ಭಾರತ ಸೇರ್ಪಡೆಗೆ ಅಡ್ಡಗಾಲು ಹಾಕುವ ದುರ್ಬುದ್ಧಿ, ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಪ್ರವರ್ತಕ ದೇಶವೆಂದು ಪರಿಗಣಿಸುವ ಯತ್ನಕ್ಕೆ ಅಡ್ಡಗಾಲು, ಪಾಕ್‍ನ ಜೆಇಎಂ ಮುಖ್ಯಸ್ಥ ಮËಲಾನಾ ಅಜರ್ ಮಸೂದ್‍ನನ್ನು ಭಯೋತ್ಪಾದಕನೆಂದು ಘೋಷಿಸಲು ಅಡ್ಡಿ ಉಂಟುಮಾಡುತಿರುವ ದುರ್ನೀತಿ-ಮುಂತಾದ ಹಲವು ವಿಷಯಗಳಲ್ಲಿ ಭಾರತದೊಂದಿಗೆ ಚೀನಾ ವ್ಯತಿರಿಕ್ತವಾಗಿ ವ್ಯವಹರಿಸುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin