ಜನಪದ ಕಲೆಗಳು ಸಂಸ್ಕೃತಿಯನ್ನು ಬಿಂಬಿಸುತ್ತವೆ

ಈ ಸುದ್ದಿಯನ್ನು ಶೇರ್ ಮಾಡಿ

12

ಹೂವಿನಹಡಗಲಿ,ಜ.19- ಗ್ರಾಮೀಣ ಬದುಕಿನ ನೈಜ ಸಂಸ್ಕೃತಿಯನ್ನು  ಜನಪದ ಕಲೆಗಳು ಬಿಂಬಿಸುತ್ತವೆ ಎಂದು ತಹಶೀಲ್ದಾರ್ ಕೆ. ರಾಘವೇಂದ್ರರಾವ್ ಅಭಿಪ್ರಾಯಪಟ್ಟರು.ತಾಲೂಕಿನ ಇಟ್ಟಿಗಿ ಗ್ರಾಮದ ಆಂಜನೇಯ ಕಲಾ ಭವನದಲ್ಲಿ ಬಳ್ಳಾರಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ಚಂದ್ರಶೇಖರ ಕಲಾ ಬಳಗ ಅಂಗೂರು, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಇಟ್ಟಿಗಿ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಯುವಜನ ಮೇಳ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಗ್ರಾಮೀಣ ಜನಪದ ಕಲೆಗಳಾದ ಸುಗ್ಗಿ ಕುಣಿತ, ಚರ್ಮವಾದ್ಯ, ತೊಗಲು ಬೊಂಬೆ, ಗೀಗೀ ಪದಗಳು, ಬಯಲಾಟ ಲಾವಣಿ ಪದ, ಹಂತಿಯ ಹಾಡು ಗಳು, ಹಳ್ಳಿಗಾಡಿನ ಜನತೆಯ ಬದುಕಿನಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ. ಇಂತಹ ಕಲೆಗಳು ಮತ್ತು ಕಲಾವಿದರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿ,  ಪ್ರೋತ್ಸಾಹಿಸಿದರೆ ಮಾತ್ರ ಕಲೆ, ಸಂಸ್ಕೃತಿ  ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾನಪದ ಕಲೆ ಉಳಿಸಿ ಬೆಳೆಸಲು ಮುಂದಾಗಲು ಕರೆ ನೀಡಿದರು.

ಕಲಾ ಪೋಷಕರು ಹಾಗೂ ಉಪನ್ಯಾಸಕ ಕುಂಚೂರು ಕೊಟ್ರೇಶ್ ಯುವಜನ ಮೇಳವನ್ನು ಉದ್ಘಾಟಿಸಿ ಮಾತನಾಡಿ, ರೈತಾಪಿವರ್ಗದ ಜನರ ಬದುಕಿನ ನೈಜಸ್ಥಿತಿಯನ್ನು ಬಿಂಬಿಸುವ ಕಲೆಗಳು ಜನಮನದಲ್ಲಿ ಉಳಿದಿವೆ ಎಂದು ತಿಳಿಸಿದರು. ಸಂದರ್ಭದಲ್ಲಿ ಗ್ರಾಪಂ ಸದಸ್ಯೆ ಕೆ. ನಾಗಮ್ಮ ನಿವೃತ್ತ ಶಿಕ್ಷಕ ಟಿ. ವಿರುಪಾಕ್ಷಪ್ಪ, ಎಸ್‍ಡಿಎಂಸಿ ಅಧ್ಯಕ್ಷ ಚಿಗಟೇರಿ ನಿಂಗಪ್ಪ, ಕೆಎನ್‍ಎಸ್‍ಸಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ. ಕೊಟ್ರೇಶಪ್ಪ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ಚಿಗಟೇರಿ ಹಾಲಪ್ಪ, ಉಪಸ್ಥಿತರಿದ್ದರು.

ಸ್ಪರ್ಧಾ ವಿಜೇತರು : ಜಾನಪದ ಗೀತೆಯಲ್ಲಿ ಮಹಾತ್ಮಗಾಂಧೀಜಿ ಯುವಕ ಸಂಘ ಹಿರೇಕೊಳಚಿ ಪ್ರಥಮ, ಕೆಎನ್‍ಎಸ್‍ಸಿ ವಿದ್ಯಾಸಂಸ್ಥೆ ಇಟ್ಟಿಗಿ ದ್ವಿತೀಯ, ಜಾನಪದ ನೃತ್ಯ ಮಹಾತ್ಮಗಾಂಧೀಜಿ ಯುವಕ ಸಂಘ ಹಿರೇಕೊಳಚಿ ಪ್ರಥಮ, ತವನಿಧಿ ಸಂಸ್ಥೆ ಇಟ್ಟಿಗಿ ದ್ವಿತೀಯ,

ಏಕಪಾತ್ರಾಭಿನಯ: ಹಿರೇಕೊಳಚಿ ಲಕ್ಕಪ್ಪ ಪ್ರಥಮ, ಎಸ್. ದಯಾನಂದ ಸೋಗಿ ದ್ವಿತೀಯ,

ಕೋಲಾಟ : ನೇತಾಜಿ ಯುವಕ ಸಂಘ ಹಿರೇಕೊಳಚಿ ಪ್ರಥಮ, ಕನಕದಾಸ ಯುವಕ ಸಂಘ ಇಟ್ಟಿಗಿ ದ್ವಿತೀಯ, ಗೀಗೀಪದ: ಮಹಾತ್ಮಗಾಂಧೀಜಿ ಯುವಕ ಸಂಘ ಹಿರೇಕೊಳಚಿ ಪ್ರಥಮ, ಸ್ನೇಹ ಬಳಗ ಯುವಕ ಸಂಘ ಇಟ್ಟಿಗಿ ದ್ವಿತೀಯ,
ಚರ್ಮವಾದ್ಯ: ಮಹಾತ್ಮಗಾಂಧಿ ಯುವಕ ಸಂಘ ಹಿರೇಕೊಳಚಿ ಪ್ರಥಮ, ಜೈ ಭೀಮ ಯುವಕ ಸಂಘ ಇಟ್ಟಿಗಿ (ದ್ವಿತೀಯ),

ರಂಗಗೀತೆ : ಅಶೋಕ ಕೆ. ಅಂಗೂರು, ಎಸ್. ದಯಾನಂದಗೌಡ ಸೋಗಿ (ದ್ವಿತೀಯ),

ದೊಡ್ಡಾಟ : ದುರ್ಗಾದೇವಿ ಯುವಕ ಸಂಘ ಸೋಗಿ (ಪ್ರಥಮ)

ಭಾವಗೀತೆ : ಅಶೋಕ ಕೆ. ಅಂಗೂರು (ಪ್ರಥಮ), ಜಿ.ರಮೇಶ್ ಹಿರೇಕೊಳಚಿ (ದ್ವಿತೀಯ),

ಲಾವಣಿ ಪದ : ಪಿ. ರಾಜಸಾಬ್ ಇಟ್ಟಿಗಿ (ಪ್ರಥಮ) ದಿನೇಶ್ ಇಟ್ಟಿಗಿ (ದ್ವಿತೀಯ). ಯುವ ಕಲಾವಿದೆಯರು: ಜಾನಪದ ಗೀತೆಯಲ್ಲಿ ಕೆ.ಎನ್.ಎಸ್.ಸಿ. ವಿದ್ಯಾಸಂಸ್ಥೆ ಇಟ್ಟಿಗಿ (ಪ್ರಥಮ) ಬನಶಂಕರಿ ಕಲಾತಂಡ ಇಟ್ಟಿಗಿ (ದ್ವಿತೀಯ),

ಕೋಲಾಟ : ಕೆ.ಎನ್.ಎಸ್.ಸಿ. ವಿದ್ಯಾಸಂಸ್ಥೆ ಇಟ್ಟಿಗಿ (ಪ್ರಥಮ) ಕನಕದಾಸ ಯುವಕ ಸಂಘ ಇಟ್ಟಿಗಿ (ದ್ವಿತೀಯ), ಜಾನಪದ ನೃತ್ಯ : ಕೆ.ಎನ್.ಎಸ್.ಸಿ. ವಿದ್ಯಾಸಂಸ್ಥೆ ಇಟ್ಟಿಗಿ (ಪ್ರಥಮ), ತವನಿಧಿ ವಿದ್ಯಾಸಂಸ್ಥೆ ಇಟ್ಟಿಗಿ (ದ್ವಿತೀಯ)

ಗೀಗೀಪದ: ಕನಕದಾಸ ಯುವಕ ಸಂಘ ಇಟ್ಟಿಗಿ (ಪ್ರಥಮ), ಮಲ್ಲಮ್ಮ ಮಹಿಳಾ ಮಂಡಳಿ ಇಟ್ಟಿಗಿ,

ಲಾವಣಿ: ಶೃತಿ ಜವಳಿ ಇಟ್ಟಿಗಿ (ಪ್ರಥಮ), ಚಿನ್ನಮ್ಮ ಇಟ್ಟಿಗಿ (ದ್ವಿತೀಯ),

ಭಾವಗೀತೆ : ಶೃತಿ ಜವಳಿ ಇಟ್ಟಿಗಿ (ಪ್ರಥಮ), ನಾಗಮ್ಮ ಇಟ್ಟಿಗಿ (ದ್ವಿತೀಯ), ಸೋಬಾನೆ ಪದ: ದುರ್ಗಾದೇವಿ ಯುವತಿ ಸಂಘ ಸೋಗಿ (ಪ್ರಥಮ) ನಿಂಗಮ್ಮ.ಟಿ. ಕನಕದಾಸ ಸೇವಾ ಸಮಿತಿ ಇಟ್ಟಿಗಿ (ದ್ವಿತೀಯ),

ರಂಗಗೀತೆ : ಸುಮಂಗಲಮ್ಮ.ಕೆ. ಇಟ್ಟಿಗಿ (ಪ್ರಥಮ), ಪಿ.ತಿಂದಮ್ಮ ಎಸ್.ಜಿ. (ದ್ವಿತೀಯ).

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin