ನೋಟ್ ಬ್ಯಾನ್ ನಂತರ ಈವರೆಗೆ ಆರ್‍ಬಿಐ ಚಲಾವಣೆಗೆ ತಂದ ಹೊಸ ನೋಟುಗಳೆಷ್ಟು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Newss-notes

ನವದೆಹಲಿ, ಜ.19- ನೋಟು ಅಮಾನ್ಯಗೊಂಡ ನ.8ರ ನಂತರ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ನೆರವಾಗಲು ಭಾರತೀಯ ರಿಸರ್ವ್ ವ್ಯಾಂಕ್ (ಆರ್‍ಬಿಐ) 9.2 ಲಕ್ಷ ಕೋಟಿ ರೂ.ಗಳ ಹೊಸ ನೋಟುಗಳನ್ನು ಚಲಾವಣೆಗೆ ತಂದಿದೆ ಎಂದು ಮೂಲಗಳು ತಿಳಿಸಿವೆ.   ನೋಟು ರದ್ದತಿ ಕುರಿತು ನಿನ್ನೆ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಆರ್‍ಬಿಐ ಗೌರ್ನರ್ ಊರ್ಜಿತ್ ಪಟೇಲ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಸಂಸದೀಯ ಸಮಿತಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.  500 ಮತ್ತು 1000 ರೂ.ಗಳ ಹಳೆ ನೋಟುಗಳನ್ನು ಅಮಾನ್ಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ ನಂತರ ಈವರೆಗೆ ಆರ್‍ಬಿಐ 15.4 ಲಕ್ಷ ಕೋಟಿ ಹಳೆ ಕರೆನ್ಸಿಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭಿಸಿರುವುದಾಗಿ ಮೂಲಗಳು ತಿಳಿಸಿವೆ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin