ಯುವಿ-ಧೋನಿ ಸೂಪರ್ ಸೆಂಚುರಿಗೆ ಆಂಗ್ಲರು ಸುಸ್ತು

ಈ ಸುದ್ದಿಯನ್ನು ಶೇರ್ ಮಾಡಿ

Dhoni-Yuvi

ಕಟಕ್. ಜ.19– ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಹಾಗೂ ಅಲ್‍ರೌಂಡರ್ ಯುವರಾಜ್ ಸಿಂಗ್ ಅಮೋಘ ಶತಕ ದಾಖಲಿಸಿದ್ದಾರೆ. ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡಯುತ್ತಿರುವ ಪಂದ್ಯದಲ್ಲಿ ಯುವಿ ಹಾಗೂ ಮಾಹಿ ಅವರ ಸ್ಫೋಟಕ ಶತಕ ಬಾರಿಸಿದ್ದರು.  ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಈ ವೇಳೆ ಯುವರಾಜ್ ಸಿಂಗ್ ಹಾಗೂ ಧೋನಿ ಅವರು ಎಚ್ಚರಿಕೆ ಆಟವಾಡಿ ತಂಡದ ರಕ್ಷಣೆಗೆ ನಿಂತರು. ಆರಂಭದಲ್ಲೇ ನಿಧಾನ ಆಟಕ್ಕೆ ಮೋರೆ ಹೋದ ಇಬ್ಬರು ಆಟಗಾರರ ನಂತರ ಸಿಡಿದು ನಿಂತರು.

ಮಾಹಿ ಹಾಗೂ ಯುವಿ ಆಟಕ್ಕೆ ಇಂಗ್ಲೆಂಡ್ ಬೌಲರ್‍ಗಳು ದಂಗಾದರು. ಮೊದಲು ಯುವಿ ಆಕರ್ಷಕ ಶತಕ ಸಿಡಿಸಿದರೆ ಬಳಿಕ ಮಾಹಿ ಶತಕ ದಾಖಲಿಸಿದರು. ಇಬ್ಬರು ಆಟವನ್ನು ಕ್ರೀಡಾಂಣದಲ್ಲಿದ್ದ ಅಭಿಮಾನಿಗಳು ಕಣ್ತುಂಬಿಸಿಕೊಂಡರು. ಬೌಂಡರಿ, ಸಿಕ್ಸರ್ ಸುರುಮಳೆಗೈದರು.  4ನೇ ವಿಕೆಟ್‍ನಲ್ಲಿ 256 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. 127 ಎಸೆತಗಳನ್ನು ಎದುರಿಸಿದ ಯುವಿ 21 ಬೌಂಡರಿ, 3 ಸಿಕ್ಸರ್ ಸಹಿತ 150 ರನ್ ಕಲೆ ಹಾಕಿ ವೋಗ್ಸ್ ಬೌಲಿಂಗ್‍ನಲ್ಲಿ ಔಟ್ ಆದರು. ಯುವಿ ಸಾಥ್ ನೀಡಿದ ಧೋನಿ ಅಬ್ಬರದ ಶತಕ ದಾಖಲಿಸಿದರು.

5 ವರ್ಷಗಳ ನಂತರ ಸೆಂಚುಸಿ ಸಿಡಿಸಿದ ಯುವರಾಜ್ ಸಿಂಗ್

ಕಳೆದ ಮೂರು ವರ್ಷಗಳಿಂದ ತಂಡಕ್ಕೆ ಮರಳಲು ಹರಸಾಹಸಪಡುತ್ತಿದ್ದ ಯುವರಾಜ್ ಸಿಂಗ್, ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದರು.  ಶತಕಕ್ಕೆ ಕೇವಲ ಒಂದು ರನ್ ಬೇಕಿದ್ದ ಸಂದರ್ಭದಲ್ಲಿ ಯುವಿ ಪ್ಲಂಕೆಟ್ ಬೌಲಿಂಗ್‍ನಲ್ಲಿ ಒಂದು ರನ್ ಕಲೆ ಹಾಕಿ ಶತಕ ಪೂರೈಸಿದರು. ಇದರೊಂದಿಗೆ ಯುವಿ ಭಾವೋಗ್ವೇದಗೊಂಡ  ಮೈದಾನದಲ್ಲಿ ಆಟದ ವೈಭವವನ್ನು ಮೆಲುಕು ಹಾಕಿದರು.  ರಣಜಿಯಲ್ಲಿ ಅತ್ಯುತ್ತಮ ಆಟವಾಡಿ ಇಂಗ್ಲೆಂಡ್ ವಿರುದ್ಧ ಸರಣಿಗೆ ಆಯ್ಕೆಯಾದ ಯುವಿ 2ನೇ ಪಂದ್ಯದಲ್ಲಿ 14ನೇ ಶತಕ ದಾಖಲಿಸಿದ್ದಾರೆ.

ಮೂರು ವರ್ಷಗಳ ನಂತರ ಮತ್ತೆ ತಂಡದಲ್ಲಿ ಕಾಣಿಸಿಕೊಂಡ ಯುವರಾಜ್ ಬ್ಯಾಟಿಂಗ್‍ಗೆ ಕಾತುತರಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 15ರನ್‍ಗಳಿಸಿ ನಿರಾಸೆ ಮೂಡಿಸಿದ್ದರು.  ಆದರೆ ಇಂದು ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು.  ದೀರ್ಘ ಕಾಲದ ನಂತರ ಅಂದರೆ 5 ವರ್ಷ, 9 ತಿಂಗಳು, 30 ದಿನಗಳ ಬಳಿಕ ಯುವಿ 14ನೇ ಶತಕ ಬಾರಿಸಿ ಸಂಭ್ರಮಿಸಿದರು. ಆರಂಭದಲ್ಲೇ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸಮನ್‍ಗಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಯುವಿ ಸಮಯೋಚಿತ್ತ ಆಟವಾಡಿ ತಂಡದ ಬೃಹತ್ ಮೊತ್ತ ದಾಖಲಿಸಲು ನೆರವಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin