ವಿಜಯ್ ಮಲ್ಯರಿಂದ 6,203 ಕೋಟಿ ರೂ. ಸಾಲ ವಸೂಲಾತಿಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ನವದೆಹಲಿ,ಜ.19-ಬಹುಕೋಟಿ ರೂಪಾಯಿ ಸಾಲ ಎತ್ತುವಳಿ ಮಾಡಿ ಲಂಡನ್‍ಗೆ ಪರಾರಿಯಾಗಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯರಿಂದ 6,203 ಕೋಟಿ ರೂ. ಬಾಕಿ ಹಣ ವಸೂಲಿಗೆ ಸಾಲ ವಸೂಲಾತಿ ನ್ಯಾಯಾಮಂಡಳಿ (ಡಿಆರ್‍ಟಿ) ಅವಕಾಶ ನೀಡಿದೆ. ಕಿಂಗ್‍ಫಿಷರ್ ಏರ್‍ಲೈನ್ಸ್ ಪ್ರಕರಣದಲ್ಲಿ ವಿಜಯ್ ಮಲ್ಯರಿಂದ ಸಾಲ ವಸೂಲಾತಿ ಮಾಡಲು ಅವಕಾಶ ನೀಡುವಂತೆ ಕೋರಿ ಎಸ್‍ಬಿಐ ನೇತೃತ್ವದ ಒಕ್ಕೂಟವು ಡಿಆರ್‍ಟಿಗೆ ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಕೈಗೊಂಡ ನ್ಯಾಯಮಂಡಳಿ 6,203 ಕೋಟಿ ರೂ. ಸಾಲ ವಸೂಲಿಗೆ ಅನುವು ಮಾಡಿಕೊಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin