5 ವರ್ಷಗಳ ನಂತರ ಸೆಂಚುಸಿ ಸಿಡಿಸಿದ ಯುವರಾಜ್ ಸಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Yuvi

ಕಟಕ್,ಜ.19-ಕಳೆದ ಮೂರು ವರ್ಷಗಳಿಂದ ತಂಡಕ್ಕೆ ಮರಳಲು ಹರಸಾಹಸಪಡುತ್ತಿದ್ದ ಯುವರಾಜ್ ಸಿಂಗ್, ಇಲ್ಲಿನ ಬಾರಾಮತಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದ ಏಕದಿನ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸಿದರು.  ಶತಕಕ್ಕೆ ಕೇವಲ ಒಂದು ರನ್ ಬೇಕಿದ್ದ ಸಂದರ್ಭದಲ್ಲಿ ಯುವಿ ಪ್ಲಂಕೆಟ್ ಬೌಲಿಂಗ್‍ನಲ್ಲಿ ಒಂದು ರನ್ ಕಲೆ ಹಾಕಿ ಶತಕ ಪೂರೈಸಿದರು. ಇದರೊಂದಿಗೆ ಯುವಿ ಭಾವೋಗ್ವೇದಗೊಂಡ  ಮೈದಾನದಲ್ಲಿ ಆಟದ ವೈಭವವನ್ನು ಮೆಲುಕು ಹಾಕಿದರು.  ರಣಜಿಯಲ್ಲಿ ಅತ್ಯುತ್ತಮ ಆಟವಾಡಿ ಇಂಗ್ಲೆಂಡ್ ವಿರುದ್ಧ ಸರಣಿಗೆ ಆಯ್ಕೆಯಾದ ಯುವಿ 2ನೇ ಪಂದ್ಯದಲ್ಲಿ 14ನೇ ಶತಕ ದಾಖಲಿಸಿದ್ದಾರೆ.

ಮೂರು ವರ್ಷಗಳ ನಂತರ ಮತ್ತೆ ತಂಡದಲ್ಲಿ ಕಾಣಿಸಿಕೊಂಡ ಯುವರಾಜ್ ಬ್ಯಾಟಿಂಗ್‍ಗೆ ಕಾತುತರಿಂದ ಕಾಯುತ್ತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಪುಣೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 15ರನ್‍ಗಳಿಸಿ ನಿರಾಸೆ ಮೂಡಿಸಿದ್ದರು.  ಆದರೆ ಇಂದು ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು.  ದೀರ್ಘ ಕಾಲದ ನಂತರ ಅಂದರೆ 5 ವರ್ಷ, 9 ತಿಂಗಳು, 30 ದಿನಗಳ ಬಳಿಕ ಯುವಿ 14ನೇ ಶತಕ ಬಾರಿಸಿ ಸಂಭ್ರಮಿಸಿದರು. ಆರಂಭದಲ್ಲೇ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸಮನ್‍ಗಳು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಯುವಿ ಸಮಯೋಚಿತ್ತ ಆಟವಾಡಿ ತಂಡದ ಬೃಹತ್ ಮೊತ್ತ ದಾಖಲಿಸಲು ನೆರವಾದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin