Most Expected ‘ಚಕ್ರವರ್ತಿ’ಯ 3 ವಿಭಿನ್ನ ಟೀಸರ್‍ಗಳು ಇಲ್ಲಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

chakravarti

ಕಳೆದ ಕೆಲದಿನಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಕ್ರವರ್ತಿ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿದೆ. ಸತತ ಚಿತ್ರೀಕರಣ ಹಾಗೂ ಪೋಸ್ಟ್  ಪ್ರೊಡೆಕ್ಷನ್  ಕೆಲಸಗಳು ಅಂತ ಬ್ಯೂಸಿಯಾಗಿದ್ದ ಚಿಂತನ್‍ರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ಚಕ್ರವರ್ತಿ ಇನ್ನೇನು ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ಮೊದಲೇ ಹೇಳಿದಂತೆ ಚಕ್ರವರ್ತಿ ಚಿತ್ರತಂಡ, ಸಂಕ್ರಾಂತಿ ವೇಳೆಗೆ ತಮ್ಮ ಚಿತ್ರದ ಮೊದಲ ಝಲಕ್ ಮತ್ತು ಆಡಿಯೋವನ್ನು ಪ್ರೇಕ್ಷಕರ ಮುಂದೆ ತಂದಿದೆ. ಅದ್ದೂರಿಯಾಗಿ ನಡೆದ ಚಕ್ರವರ್ತಿ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಆಡಿಯೋದ ಜೊತೆ ಜೊತೆಯಲ್ಲಿಯೇ ಮೂರು ವಿಭಿನ್ನ ಟೀಸರ್‍ಗಳು ಕೂಡ ರಿಲೀಸ್ ಆಗಿ, ದರ್ಶನ್ ಅಭಿಮಾನಿಗಳಿಗೆ ಡಬಲ್ ದಮಾಖ ಸಿಕ್ಕಂತಾಗಿದೆ.

ಈ ಹಿಂದೆ ಎಕೆ 56, ಮಿಂಚು ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ಹಾಗೂ ನಿರ್ಮಾಪಕ ಸಿದ್ದಾಂತ್ ಅವರ ಬ್ಯಾನರ್‍ನಲ್ಲಿ ಈ ಚಿತ್ರ ಅದ್ದೂರಿಯಾಗಿ ನಿರ್ಮಾಣವಾಗಿದೆ. ದಿನಕರ್ ತೂಗುದೀಪ, ಆದಿತ್ಯ, ಸೃಜನ್ ಲೋಕೇಶ್, ಕುಮಾರ ಬಂಗಾರಪ್ಪ, ಯಶಸ್ ಸೂರ್ಯ ಸೇರಿದಂತೆ ನಾಯಕ ನಟರ ದಂಡೇ ಈ ಚಿತ್ರದಲ್ಲಿ ಬಣ್ಣ ಹಚ್ಚಿದೆ. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ. ಕೆ.ಎಸ್. ಚಂದ್ರಶೇಖರ್ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅದ್ಧೂರಿಯಾಗಿ ನಡೆದ ಚಕ್ರವರ್ತಿ ಸಿನಿಮಾದ ಹಾಡುಗಳು ಮತ್ತು ಫಸ್ಟ್ ಟೀಸರ್ ಬಿಡುಗಡೆಯ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳ ಬದಲಿಗೆ ಕನ್ನಡ ಸುದ್ದಿವಾಹಿನಿಗಳ ಛಾಯಾಗ್ರಾಹಕರಿಂದ ಚಿತ್ರದ ಆಡಿಯೋ ಸಿಡಿಗಳನ್ನು ರಿಲೀಸ್ ಮಾಡಿಸಿದ್ದು ಸಮಾರಂಭದ ವಿಶೇಷವಾಗಿತ್ತು.  ಒಂದೇ ಬಾರಿಗೆ ಈ ಚಿತ್ರದ ಮೂರು ವಿಭಿನ್ನ ಟೀಸರ್‍ಗಳು ರಿಲೀಸ್ ಆಗಿದ್ದು, ಮೂರು ಕಾಲಘಟ್ಟದಲ್ಲಿ ಚಕ್ರವರ್ತಿ ಸಿನಿಮಾದ ಕತೆಯನ್ನು ತೆರೆಯ ಮೇಲೆ ತೆರೆದಿಡುತ್ತವೆ.

ಚಿತ್ರದ ಮೊದಲ ಟೀಸರ್‍ನಲ್ಲಿ ಸುಮಾರು 1980ರ ದಶಕದ ಭೂಗತ ದೊರೆಯ ಪಾತ್ರದಲ್ಲಿ, ರೆಟ್ರೊಸ್ಟೈಲ್‍ನಲ್ಲಿ ನಟ ದರ್ಶನ್ ಕಾಣಿಸಿಕೊಂಡರೆ, ಎರಡನೇ ಟೀಸರ್ ಕೊಂಚ ರೊಮ್ಯಾಂಟಿಕ್ ಆಗಿದ್ದು, ಇದರಲ್ಲಿ ದರ್ಶನ್ ಮತ್ತು ದೀಪಾ ಸನ್ನಿಧಿ ಇಬ್ಬರೂ ಕೂಡ ರೆಟ್ರೋ  ಸ್ಟೈಲ್‍ನಲ್ಲಿ ಲವ್ ಅಂಡ್ ರೊಮ್ಯಾನ್ಸ್ ಮೂಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ . ಇನ್ನು ಮೂರನೇ ಟೀಸರ್ ಔಟ್ ಅಂಡ್ ಔಟ್ ಮಾಸ್ ಆಗಿದ್ದು, ಇಂದಿನ ಮಾಡ್ರನ್ ರೆಟ್ರೋನಲ್ಲಿ ದರ್ಶನ್ ಮಿಂಚಿದ್ದಾರೆ. ಅದ್ದೂರಿಯಾಗಿ ನಡೆದ ಈ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಟ ದರ್ಶನ್, ಆದಿತ್ಯ, ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ರಾಜೇಂದ್ರಸಿಂಗ್ ಬಾಬು, ದಿನಕರ್ ತೂಗುದೀಪ್, ದೀಪಾ ಸನ್ನಿಧಿ, ಶರತ್ ಲೋಹಿತಾಶ್ವ, ಹರೀಶ್ ರಾಯ್, ಚಿತ್ರದ ಸಹ ನಿರ್ಮಾಪಕ ಅಣಜಿ ನಾಗರಾಜ್ ಸೇರಿದಂತೆ ಬಹುತೇಕ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು ಚಿತ್ರದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇನ್ನು ಬಿಡುಗಡೆಯಾದ ಚಕ್ರವರ್ತಿ ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ . ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಟ ದರ್ಶನ್‍ರ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಚಿತ್ರದ ಹಾಡುಗಳು ಈಗಾಗಲೇ ಜೋರಾದ ಹವಾ ಕ್ರಿಯೇಟ್ ಮಾಡುತ್ತಿದೆ. ಆನಂದ್ ಆಡಿಯೋ ಚಕ್ರವರ್ತಿ ಚಿತ್ರದ ಆಡಿಯೋ ಹಕ್ಕನ್ನ ಖರೀದಿಸಿದ್ದು, ಯ್ಯೂಟ್ಯೂಬ್‍ನಲ್ಲಿ ರಿಲೀಸ್ ಮಾಡಿರುವ ಟೈಟಲ್ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ನೋಡೋ ಕತ್ತು ಎತ್ತಿ, ಎಷ್ಟು ಹೊತ್ತು ನೋಡ್ತಿ. ಎತ್ತೋ ಎತ್ತೋ ಆರತಿ….ಬಂದ ಚಕ್ರವರ್ತಿ…..ಎಂಬ ಮಾಸ್ ಸಾಲುಗಳನ್ನ ಹೊಂದಿರುವ ಈ ಹಾಡು ಈಗಎಲ್ಲೆಡೆ  ಟ್ರೆಂಡ್ ಕ್ರಿಯೆಟ್ ಮಾಡುತ್ತಿದೆ. ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಮಾಸ್ ಹಾಡಿಗೆ, ವ್ಯಾಸರಾಜ್ ಎಂಬುವವರು ಧ್ವನಿಯಾಗಿದೆ . ಹಾಡು ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಸುಮಾರು 28 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದಿದೆ.

ನಟ ದರ್ಶನ್ ಅವರ ಹಲವಾರು ಚಿತ್ರಗಳಿಗೆ ಸಂಭಾಷಣೆಗಳನ್ನು ರಚಿಸಿದ್ದ ಚಿಂತನ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಸ್ನೇಹಾನಾ ಪ್ರೀತೀನಾ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕ ಅಣಜಿ ನಾಗರಾಜ್ ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ . ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ದೀಪಾ ಸನ್ನಿಧಿ ಹೆಜ್ಜೆ ಹಾಕಿದ್ದು, ಬಹಳ ದಿನಗಳ ನಂತರ ನಟಿ ಚಾರುಲತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ದರ್ಶನ್‍ರ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ್ ಈ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin