ಕೆನರಾ ಬ್ಯಾಂಕ್‍ಗೆ ಮೂರನೇ ತ್ರೈಮಾಸಿಕದಲ್ಲಿ 322 ಕೋಟಿ ನಿವ್ವಳ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

Canara-Bank

ಬೆಂಗಳೂರು,ಜ.20-ಆರ್ಥಿಕ ವರ್ಷ 2017ರ ಮೂರನೇ ತ್ರೈಮಾಸಿಕದಲ್ಲಿ ಕೆನರಾ ಬ್ಯಾಂಕ್ ಒಟ್ಟು 322 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ರಾಕೇಶ್ ಶರ್ಮ ತಿಳಿಸಿದ್ದಾರೆ.  ರಾಜ್ಯದಲ್ಲಿ 5972 ಶಾಖೆಗಳನ್ನು ಹೊಂದಿದ್ದು, 10394 ಎಟಿಎಂಗಳು, 40,31,000 ಮೊಬೈಲ್ ಬ್ಯಾಂಕಿಂಗ್ ಮತ್ತು 27.08 ಲಕ್ಷ ಇಂಟರ್‍ನೆಟ್ ಬ್ಯಾಂಕಿಂಗ್ ಗ್ರಾಹಕರನ್ನು ಹೊಂದಿದೆ. ಕೇಂದ್ರ ಸರ್ಕಾರದ ಹಲವು ನಿರ್ಧಾರಗಳಿಂದ ಕಳೆದ ತ್ರೈಮಾಸಿಕ ಮಹತ್ವದ್ದಾಗಿತ್ತು. ಈ ತ್ರೈಮಾಸಿಕದಲ್ಲಿ ನಾವು ಹಲವು ರೀತಿಯ ಒತ್ತಡಗಳಿಂದ ಹೊರಬಂದಿದ್ದು, ಮುಂದಿನಗಳಲ್ಲಿ ಮತ್ತಷ್ಟು ಕಾರ್ಯಶೀಲರಾಗಿ ಕಾರ್ಯ ನಿರ್ವಹಿಸಲು ಪ್ರೇರಕವಾಗಿದೆ.

ಗ್ರಾಹಕ ಸೇವೆಯನ್ನು ಮತ್ತಷ್ಟು ಅಭಿವೃದ್ದಿಗೊಳಿಸಿ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದೇ ನಮ್ಮೆಲ್ಲರ ಧ್ಯೇಯವಾಗಿದೆ. ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹರ್ದೀಶ್‍ಕುಮಾರ್, ಧೀನಬಂಧು ಮಹಾಪಂತೂರ್, ಭಾರತಿ ಮತ್ತಿತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin