ಟೆಹರಾನ್‍ನಲ್ಲಿ ಅಗ್ನಿಗಾಹುತಿಯಾದ ಕಟ್ಟಡ ಕುಸಿತ, 35 ಮಂದಿ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Fire-Building

ಟೆಹರಾನ್, ಜ.20-ಅಗ್ನಿಗಾಹುತಿಯಾದ 17 ಮಹಡಿಗಳ ಕಟ್ಟಡವೊಂದು ಕುಸಿದು ಬಿದ್ದು, 35ಕ್ಕೂ ಹೆಚ್ಚು ಮಂದಿ ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿ, 75ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಇರಾನ್ ರಾಜಧಾನಿ ಟೆಹರಾನ್‍ನಲ್ಲಿ ಸಂಭವಿಸಿದೆ. ಟೆಹರಾನ್‍ನ ಕೇಂದ್ರ ಸ್ಥಾನದಲ್ಲಿರುವ 1969ರಲ್ಲಿ ನಿರ್ಮಾಣಗೊಂಡ ಪ್ಲಾಸ್ಕೋ ಕಟ್ಟಡದಲ್ಲಿ ನಿನ್ನೆ ಈ ದುರಂತ ಸಂಭವಿಸಿದೆ. ಕಟ್ಟಡಕ್ಕೆ ಬೆಂಕಿ ಬಿದ್ದ ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿ ಶಾಮಕ ಸಿಬ್ಬಂದಿ ಹಲವು ಗಂಟೆಗಳ ಕಾಲ ಬೆಂಕಿ ನಂದಿಸಲು ಶ್ರಮಿಸುತ್ತಿದ್ದರು. ಈ ಸಮಯದಲ್ಲೇ ಕಟ್ಟಡ ಧರೆಗೆ ಉರುಳಿತು. ಈ ದೃಶ್ಯವನ್ನು ಸರ್ಕಾರಿ ಟೆಲಿವಿಷನ್ ಇರ್ನಾ ನೇರ ಪ್ರಸಾರದಲ್ಲಿ ಬಿತ್ತರಿಸಿತು. ಕೆಲವೇ ಕ್ಷಣಗಳಲ್ಲಿ ಕಟ್ಟಡ ಕುಸಿದ ಬಳಿಕ ದಟ್ಟ ಕಂದು ಹೊಗೆ ಮೇಲೆದ್ದಿತು.

ಬೆಂಕಿ ನಂದಿಸಲು 10 ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಸಿಬ್ಬಂದಿ ಅಗ್ನಿ ಕೆನ್ನಾಲಿಗೆಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದರು. ರಕ್ಷಣೆ ಬಂದವರನ್ನೇ ಈ ಕಟ್ಟಡ ಬಲಿ ತೆಗೆದುಕೊಂಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin