‘ನನ್ನ ಮಗನನ್ನು ಕೊಲೆ ಮಾಡಿರುವ ಶಂಕೆಯಿದೆ ತನಿಖೆ ನಡೆಸಿ ನ್ಯಾಯ ಕೊಡಿಸಿ’ : ಪೊಲೀಸರ ಮೊರೆಹೋದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Mysuru-Shashidhar

ಮೈಸೂರು,ಜ.20- ಅಸಹಜವಾಗಿ ಮೃತಪಟ್ಟಿರುವ ತನ್ನ ಮಗನನ್ನು ಕೊಲೆ ಮಾಡಿರುವ ಶಂಕೆಯಿದ್ದು, ತನಿಖೆ ನಡೆಸಿ ನ್ಯಾಯ ಕೊಡಿಸಬೇಕೆಂದು ತಾಯಿಯೊಬ್ಬರು ತಡವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದ ಮಂಗಳಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿರುವ ತಾಯಿ.   ತನ್ನ ಮಗ ಶಶಿಧರ್ ಚಾಲಕನಾಗಿದ್ದು, ಯುವತಿಯೊಬ್ಬಳನ್ನು ಪ್ರತೀಸುತ್ತಿದ್ದ, ಆಕೆ ಮನೆಯವರೇ ಕೊಲೆ ಮಾಡಿರಬೇಕೆಂದು ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಗ್ರಾಮದವಳೇ ಆದ ಎಂಟೆಕ್ ವ್ಯಾಸಂಗ ಮಾಡುತ್ತಿರುವ ಯುವತಿಯನ್ನು ಮಗ ಪ್ರೀತಿಸುತ್ತಿದ್ದ. ಇಬ್ಬರೂ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಪರೀಕ್ಷೆ ಮುಗಿದ ನಂತರ ವಿವಾಹ ಆಗುವುದಾಗಿ ತಿಳಿಸಿದ್ದಳು ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಸೆ.8ರಂದು ಮುಖ್ಯವಾದ ಕೆಲಸವಿದೆ. ಯುವತಿ ಹಾಗೂ ಆಕೆ ತಂದೆ ಜತೆ ಮಾತನಾಡಿ ಬರುತ್ತೇನೆ ಎಂದು ಮೈಸೂರಿಗೆ ಹೋದ ಮಗ ಶವವಾಗಿದ್ದ.  ನಜರ್‍ಬಾದ್ ಠಾಣೆ ವ್ಯಾಪ್ತಿಯಲ್ಲಿ ಮಗ ಅಸಹಜವಾಗಿ ಮೃತಪಟ್ಟಿದ್ದು, ಆಗ ಸ್ನೇಹಿತರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದರು. ಮರಣೋತ್ತರ ಪರೀಕ್ಷೆ ನಂತರ ಶವ ಸಂಸ್ಕಾರ ಮಾಡಿದ್ದೆವು ಆದರೆ ಈಗ ಮಗನ ಸಾವಿನ ಬಗ್ಗೆ ಅನುಮಾನಗಳು ಹುಟ್ಟಿವೆ ಎಂದು ತಾಯಿ ಮಂಗಳಮ್ಮ ತಿಳಿಸಿದ್ದಾರೆ.  ಮಗ ಸಾವನ್ನಪ್ಪಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಭಾವಿಸಿದ್ದೆ. ಆದರೆ ಈಗೀಗ ಸ್ನೇಹಿತರು ಮತ್ತಿತರರು ಮಗನ ಸಾವಿನ ಬಗ್ಗೆ ಆಡುತ್ತಿರುವ ಮಾತುಗಳಿಂದ ಕೊಲೆ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ. ಎಸ್ಪಿ ಚನ್ನಣ್ಣನವರ್ ಅವರನ್ನು ಭೇಟಿ ಮಾಡಿರುವ ಮಂಗಳಮ್ಮ ಅವರು ದೂರು ಸಲ್ಲಿಸಿ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin