ಹಿಂದೂ ಮಹಾಸಾಗರದಲ್ಲಿ ಚೀನಾ ನೌಕೆ ಓಡಾಟ : ಎಚ್ಚರದಿಂದಿರಲು ಭಾರತಕ್ಕೆ ಅಮೆರಿಕ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

China-01

ವಾಷಿಂಗ್ಟನ್, ಜ.20-ಭಾರತೀಯ ಜಲಪ್ರದೇಶದಲ್ಲಿ ಅದರಲ್ಲೂ ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಯ ಸಂಚಾರ ಹೆಚ್ಚುತ್ತಿರುವ ಬಗ್ಗೆ ಅಮೆರಿಕದ ಪೆಸಿಫಿಕ್ ಕಮಾಂಡ್‍ನ ಕಮಾಂಡರ್ ಅಡ್ಮಿರಲ್ ಹ್ಯಾರಿ ಹ್ಯಾರಿಸ್ ಜ್ಯೂನಿಯರ್ ಎಚ್ಚರಿಕೆ ನೀಡಿದ್ದಾರೆ. ಭಾರತೀಯ ಕರಾವಳಿಗೆ ಸೇರಿದ ಜಲಪ್ರದೇಶದಲ್ಲಿ ಚೀನಾ ಪ್ರಭಾವ ಹೆಚ್ಚುತ್ತಿದ್ದು, ಅದು ಭಾರತಕ್ಕೆ ಕಳವಳದ ವಿಷಯವಾಗುವುದು ಖಂಡಿತ ಎಂದು ಅವರು ಹೇಳಿದ್ದಾರೆ.  ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಯ ಚಟುವಟಿಕೆಗಳನ್ನು ಅವರು ವಿವರಿಸಿದ್ದಾರೆ. ಚೀನಾದ ವಿಮಾನವಾಹಕ ನೌಕೆಯ ಭಾರತೀಯ ಜಲಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. ಅಲ್ಲಿ ಈಗ ಆ ನೌಕೆಯನ್ನು ತಡೆಯುವವರು ಯಾರೂ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ವಿಮಾನವಾಹಕ ನೌಕೆಗಳ ನಿರ್ವಹಣೆಯಲ್ಲಿ ಭಾರತೀಯ ನೌಕಾಪಡೆ ಚೀನಾಕ್ಕಿಂತಲೂ ಹೆಚ್ಚು ಸಾಮರ್ಥ್ಯ ಮತ್ತು ಅನುಭವ ಹೊಂದಿವೆ. ಹಗಲು-ರಾತ್ರಿ ಕಾರ್ಯಾಚರಣೆ ನಡೆಸಲಬಲ್ಲ ಅಮೆರಿಕದ ಬೃಹತ್ ವಿಮಾನವಾಹಕ ನೌಕೆಗಳಿಗೆ ಚೀನಾ ಸಮವಲ್ಲ. ಚೀನಿ ಯುದ್ದನೌಕೆಗಳು ಮತ್ತು ಸಬ್‍ಮರೀನ್‍ಗಳ ಚಲನವಲನಗಳ ಮೇಲೆ ನಿಗಾ ಇಡಲು ಅಮೆರಿಕ ಮತ್ತು ಭಾರತ ಪಡೆಗಳು ಸೂಕ್ತ ಸಹಯೋಗದ ವ್ಯವಸ್ಥೆ ಮಾಡಿಕೊಂಡಿವೆ ಎಂದು ಅಮೆರಿಕ ಕಮಾಂಡರ್ ಅಡ್ಮಿರಲ್ ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin