ಅಧಿಕಾರಕ್ಕೇರಿದ ಮೊದಲ ದಿನವೇ ಒಬಾಮಾಗೆ ಶಾಕ್ ಕೊಟ್ಟ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

obhama

ವಾಷಿಂಗ್ಟನ್, ಜ.21- ಅಮೆರಿಕದ 45ನೇ ಅಧ್ಯಕ್ಷರಾಗಿ ನಿನ್ನೆ ಅಕಾರ ಸ್ವೀಕರಿಸಿದ ಟ್ರಂಪ್ ಕರ್ತವ್ಯದ ಮೊದಲ ದಿನವೇ ಮಾಜಿ ಅಧ್ಯಕ್ಷ ಬರಾಕ್‍ಒಬಾಮಗೆ ದೊಡ್ಡ ಶಾಕ್ ನೀಡಿದ್ದಾರೆ. ಇಂದು ವಾಷಿಂಗ್ಟನ್ ಶ್ವೇತಭವನ ದ ಓವೆಲ್ ಕಚೇರಿಗೆ ತೆರಳಿ ಅಕೃತ ದಾಖಲೆ ಪತ್ರಗಳಿಗೆ ಸಹಿ ಮಾಡಿದ ಟ್ರಂಪ್, ಈ ಹಿಂದೆ ಒಬಾಮ ಜಾರಿಗೊಳಿಸಿದ್ದ ಆರೋಗ್ಯ ರಕ್ಷಣೆ ಕಾನೂನನ್ನು ಹಿಂದಕ್ಕೆ ಪಡೆಯುವ ದಸ್ತಾವೇಜ್‍ಗೆ ಅಂಕಿತ ಹಾಕಿದರು. ಒಬಾಮ ಜಾರಿಗೊಳಿಸಿದ್ದ  ಆರೋಗ್ಯ ರಕ್ಷಣೆ ಸೇವೆಗಳು ಜನರಿಗೆ ನಿರೀಕ್ಷಿತ ಮಟ್ಟದಲ್ಲಿ ಸದ್ಬಳಕೆಯಾಗಿಲ್ಲ. ಈ ಕಾರಣಕ್ಕಾಗಿ ಅಧ್ಯಕ್ಷರು ಆ ಕಾನೂನನ್ನು ಹಿಂದಕ್ಕೆ ತೆಗೆದುಕೊಳ್ಳುವ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಶ್ವೇತಭವನದ ಉನ್ನತಾಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin