ಜ.29ರಂದು ಈ ವರ್ಷದ ಮೊದಲ ಮೋದಿ ‘ಮನ್ ಕಿ ಬಾತ್’

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ, ಜ.21-ಪ್ರಧಾನಿ ನರೇಂದ್ರ ಮೋದಿ ಜ.29ರಂದು ಈ ವರ್ಷದ ಪ್ರಥಮ ಮನ್ ಕಿ ಬಾತ್ ಮಾಸಿಕ ರೇಡಿಯೊ ಭಾಷಣ ಮಾಡಲಿದ್ದಾರೆ. ಈ ಭಾಷಣದಲ್ಲಿ ಮುಖ್ಯವಾಗಿ ಮೋದಿ ವಿವಿಧ ಮಂಡಳಿಗಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಮಾತನಾಡಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಇದಕ್ಕೆ ಸಂಬಂಧಿಸಿದ ಚಿಂತನೆಗಳು, ಸಲಹೆಗಳು ಮತ್ತು ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿ ಸಮೂಹವನ್ನು ಆಹ್ವಾನಿಸಿದ್ದಾರೆ. ತಮ್ಮ ಸಂದೇಶಗಳನ್ನು ಹಿಂದಿಯಲ್ಲಿ ಧ್ವನಿಮುದ್ರಿಸಿ ಕಳುಹಿಸುವಂತೆ ಪ್ರಧಾನಮಂತ್ರಿಯವರ ಕಾರ್ಯಾಲಯ ತಿಳಿಸಿದ್ದು, ಕೆಲವು ಧ್ವನಿಮುದ್ರಿತ ಸಂದೇಶಗಳನ್ನು ಮನ್ ಕಿ ಬಾತ್‍ನಲ್ಲಿ ಬಿತ್ತರಗೊಳ್ಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin