ಟಾಟಾ ಮೋಟಾರ್ಸ್‍ನ ಬಹುನಿರೀಕ್ಷಿತ ಟಾಟಾ ಹೆಕ್ಸಾ ಕಾರು ಮಾರುಕಟ್ಟೆಗೆ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

car

ಬೆಂಗಳೂರು, ಜ.21- ಡೈನಮಿಕ್ ಲೈಫ್‍ಸ್ಟೈಲ್‍ಗೆ ಹೊಂದುವಂತಹ ಟಾಟಾ ಮೋಟಾರ್ಸ್‍ನ ಬಹುನಿರೀಕ್ಷಿತ ಟಾಟಾ ಹೆಕ್ಸಾ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಟಾಟಾ ಹೆಕ್ಸಾ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಹಾಗೂ ಕಾರು ಪ್ರಿಯರಿಗೆ ಹೇಳಿ ಮಾಡಿಸಿದಂತಹ ವಾಹನವಾಗಿದೆ. ನಗರದಲ್ಲಿ ಮ್ಯಾನ್ಯುವಲ್ ಶ್ರೇಣಿಯ ಹೆಕ್ಸಾ ಬೆಲೆ 12.25 ಲಕ್ಷ ರೂ.ಆಗಿದ್ದರೆ, ಆಟೋಮ್ಯಾಟಿಕ್ ಶ್ರೇಣಿಯ ಹೆಕ್ಸಾದ ಬೆಲೆ 15.16 ಲಕ್ಷ.   ದೇಶಾದ್ಯಂತ 300ಕ್ಕೂ ಹೆಚ್ಚು ಮಾರಾಟ ಶೋರೂಂಗಳಲ್ಲಿ ಈ ಲೈಫ್‍ಸ್ಟೈಲ್ ಹೆಕ್ಸಾ ಕಾರು ಲಭ್ಯವಿದೆ.  ನಿನ್ನೆ ಟಾಟಾ ಹೆಕ್ಸಾ ಬಿಡುಗಡೆ ಕಾರ್ಯಕ್ರಮದಲ್ಲಿ ಟಾಟಾ ಮೋಟರ್ಸ್‍ನ ವಿನ್ಯಾಸ ವಿಭಾಗದ ಮುಖ್ಯಸ್ಥ ಪ್ರತಾಪ್ ಬೋಸ್ ಮಾತನಾಡಿ, ನಮ್ಮ ಈ   ಹೊಸ ವಾಹನವನ್ನು ಜನರ ಆಶಯದಂತೆ ವಿ ನ್ಯಾಸ ಮಾಡಲಾಗಿದೆ. ನಮ್ಮ ಹೊಸ ಇಂಪ್ಯಾಕ್ಟ್ ಡಿಸೈನ್ ತತ್ವದ ಆಧಾರದಲ್ಲಿ ಸಿದ್ಧಪಡಿಸಿರುವ ಈ ಕಾರು ಅತ್ಯಂತ ಆರಾಮದಾಯಕ, ಐಷಾರಾಮಿ, ಸ್ಟೈಲ್‍ನಿಂದ ಕೂಡಿದೆ ಎಂದು ಅವರು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin