ಪಾಕಿಸ್ತಾನ : ತರಕಾರಿ ಮಾರುಕಟ್ಟೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 21 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Pak-Blast

ಪೇಶಾವರ್, ಜ.21- ತರಕಾರಿ ಮಾರುಕಟ್ಟೆಯೊಂದರಲ್ಲಿ ಭಾರೀ ಸ್ಫೋಟದಿಂದಾಗಿ 21ಕ್ಕೂ ಹೆಚ್ಚು ಮಂದಿ ಮೃತಪಟ್ಟು ಇತರ 30 ಜನ ತೀವ್ರ ಗಾಯಗೊಂಡಿರುವ ಘಟನೆ ಈಶಾನ್ಯ ಪಾಕಿಸ್ತಾನದ ಕುರ್ರಂನಲ್ಲಿ ಇಂದು ಬೆಳಗ್ಗೆ ನಡೆದಿದೆ. ಪರಾಚಿನರ್‍ನ ಈದ್ಗಾ ಬಜಾರ್ ಒಳಗಿರುವ ಜನಸಂದಣಿಯ ಸಬ್ಜಿ ಮಂಡಿಯಲ್ಲಿ ಈ ಸ್ಫೋಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತರಕಾರಿಗಳ ಹರಾಜು ಸಂದರ್ಭದಲ್ಲಿ ತರಕಾರಿ ಪೆಟ್ಟಿಗೆಗಳ ಒಳಗೆ ಇರಿಸಿದ್ದ ಸ್ಫೋಟಕಗಳು ಸಿಡಿದು ಕನಿಷ್ಠ 21 ಮಂದಿ ಮೃತಪಟ್ಟರು. 30ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin