ಭೂಕುಸಿತದಿಂದ ಮಣ್ಣಿನಡಿ ಹುದುಗಿ ಹೋದ ಹೋಟೆಲ್, 12 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Hotel-01

ಬೀಜಿಂಗ್, ಜ.21-ಭಾರೀ ಭೂಕುಸಿತದಿಂದ ಹೊಟೇಲ್ ಒಂದು ಮಣ್ಣಿನ ರಾಶಿಯೊಳಗೆ ಸಿಲುಕಿದ್ದು, 12ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಮಧ್ಯ ಭಾಗದಲ್ಲಿ ಸಂಭವಿಸಿದೆ. ಚೀನಾದ ಹುಬೀ ಪ್ರಾಂತ್ಯದ ನನ್‍ಝಾಂಗ್ ಕೌಂಟಿಯ ಹೋಟೆಲ್ ನಿನ್ನೆ ರಾತ್ರಿ ಭೂಕುಸಿತದಿಂದ ಮಣಿನೊಳಗೆ ಹುದುಗಿತು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತ ದುರಂತ ಸಂಭವಿಸಿದಾಗ ಅತಿಥಿಗಳು, ಹೋಟೆಲ್ ಉದ್ಯೋಗಿಗಳು ಸೇರಿದಂತೆ 14 ಮಂದಿ ಭಗ್ನಾವಶೇಷಗಳಡಿ ಸಿಲುಕಿದ್ದರು. ಇವರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸರ್ಕಾರಿ ಒಡೆತನದ ಕ್ಸಿನ್‍ಹುವಾ ವಾರ್ತಾ ಸಂಸ್ಥೆ ಇಂದು ವರದಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin