ಅಸ್ಸಾಂನಲ್ಲಿ ಮತ್ತೆ ಉಲ್ಫಾ ಉಗ್ರರ ಅಟ್ಟಹಾಸ :ಮೂವರು ಯೋಧರು ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

assam-ulfa-attack
ಗುವಾಹಟಿ, ಜ.22- ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಮತ್ತೆ ಉಲ್ಫಾ ಉಗ್ರರ ಅಟ್ಟಹಾಸ ಮುಂದುವರಿದಿದೆ. ಅಸ್ಸಾಂ-ಅರುಣಾಚಲ ಪ್ರದೇಶ ಗಡಿಯಲ್ಲಿ ಇಂದು ಮುಂಜಾನೆ ಸೇನಾ ವಾಹನದ ಮೇಲೆ ಬಂಡುಕೋರರು ನಡೆಸಿದ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಸೇನೆ ಪ್ರತಿದಾಳಿ ನಡೆಸಿದ್ದು, ಭೀಕರ ಗುಂಡಿನ ಚಕಮಕಿ ನಡೆಯಿತು.  ಅಸ್ಸಾಂನ ತಿನ್‍ಸುಕಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-53ರಲ್ಲಿ 12ನೇ ಮೈಲಿನ ಬಾರಾಬಸ್ತಿಯಲ್ಲಿ ಉಗ್ರರು ಅಸ್ಸಾಂ ರೈಫಲ್ಸ್ ವಾಹನದ ಮೇಲೆ ಗ್ರೆನೇಡ್‍ಗಳನ್ನು ಎಸೆದು ಗುಂಡಿನ ಮಳೆಗರೆದರು. ಈ ಹಠಾತ್ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿ ಕೆಲವರು ಗಾಯಗೊಂಡಿದ್ದಾರೆ.  ನಂತರ ಕೆಲಕಾಲ ಗುಂಡಿನ ಚಕಮಕಿ ನಡೆದು ಉಗ್ರರು ಪರಾರಿಯಾಗಿದ್ದಾರೆ. ಬಂಡುಕೋರರಿಗಾಗಿ ಭದ್ರತಾಪಡೆ ವ್ಯಾಪಕ ಬಲೆ ಬೀಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin