ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಈಗ ಗಾಯಕ

ಈ ಸುದ್ದಿಯನ್ನು ಶೇರ್ ಮಾಡಿ

Sehwag

ನವದೆಹಲಿ, ಜ. 22- ಕ್ರಿಕೆಟ್ ಅಂಗಳದಲ್ಲಿ ತನ್ನ ಬ್ಯಾಟ್‍ನಿಂದ ಹಾಗೂ ಟ್ವೀಟ್ಟರ್‍ನಲ್ಲಿ ತನ್ನ ಮೊನಚಾದ ಮಾತುಗಳಿಂದ ಈಗಾಗಲೇ ಸುದ್ದಿ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಗಾಯಕನ ಅವತಾರದಲ್ಲೂ ಜಬರ್‍ದಸ್ತಾಗಿ ಮಿಂಚಿದ್ದಾರೆ.  ರಿಯಾಲ್ಟಿ ಶೋವೊಂದರ ಅಡಿಷನ್‍ನಲ್ಲಿ ಪಾಲ್ಗೊಂಡಿದ್ದ ಸೆಹ್ವಾಗ್ ಅವರು ಬಾಲಿವುಡ್‍ನ ಖ್ಯಾತ ಗಾಯಕ ಕಿಶೋರ್‍ಕುಮಾರ್ ಕಂಠದ ಶ್ರೇಷ್ಠ ನಟ ರಾಜೇಶ್‍ಖನ್ನಾ ಅಭಿನಯದ ಮೇರಿ ಜೀವನ್ ಸಾಥಿ ಚಿತ್ರದ  ‘ಚಲೇ ಜಾತಾ ಹೂಂ ಕಿಸಿಕಿ ಗುನ್ ಮೈ…’ ಹಾಗೂ ‘ ತು ಜಾನೆ ನಾ…’ ಎಂಬ ಹಾಡುಗಳನ್ನು ಸುಶ್ರಾವ್ಯವಾಗಿ ಆಡುವ ಮೂಲಕ ಎಲ್ಲರ ಮನಸೂರೆಗೊಂಡರು.  ಸೆಹ್ವಾಗ್‍ರೊಂದಿಗೆ ಖ್ಯಾತ ಗಾಯಕರಾದ ಸೋನು ನಿಗಂ ಹಾಗೂ ಇತರ ಗಾಯಕರು ಕೂಡ ವೇದಿಕೆಯನ್ನು ಹಂಚಿಕೊಂಡರು.   ತನ್ನ ಬ್ಯಾಟಿಂಗ್ ಹಾಗೂ ಟ್ವಿಟ್ಟರ್ ನಿಂದ ಪ್ರಸಿದ್ಧಿಯಾಗಿರುವ ನಜಾಫ್‍ಗಢ ಸಚಿನ್ ಖ್ಯಾತಿಯ ವೀರೂ ಮುಂದೊಂದು ದಿನ ಗಾಯಕನಾಗಿಯೂ ಕೂಡ ಮಿಂಚಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin