ನಾಲ್ಕು ಮರಿಗೆ ಜನ್ಮ ನೀಡಿದ ಕುರಿ

ಈ ಸುದ್ದಿಯನ್ನು ಶೇರ್ ಮಾಡಿ

kuri

ಶಿಡ್ಲಘಟ್ಟ, ಜ.21- ತಾಲೂಕು ಪಿಂಡಿಪಾಪನಹಳ್ಳಿಯಲ್ಲಿ ಚಳ್ಳಕೆರೆ ತಳಿಯ ಕುರಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿ ಸಿದೆ. ನಾಲ್ಕೂ ಮರಿಗಳು ಆರೋಗ್ಯ ದಿಂದಿದ್ದು ಲವಲವಿಕೆ ಯಿಂದಿವೆ.  ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ಪಿಂಡಿಪಾಪನಹಳ್ಳಿಯ ರೈತ ರಾಜಣ್ಣ ಎಂಬುವವರು ಸಾಕಾಣಿಕೆ ಮಾಡಿರುವ ಚಳ್ಳಕೆರೆ ತಳಿಯ ಕುರಿ ಮೊದಲ ಸೂಲಿನಲ್ಲಿಯೆ ನಾಲ್ಕು ಕುರಿ ಮರಿಗಳನ್ನು ಹಾಕುವ ಮೂಲಕ ಬೆರಗು ಮೂಡಿಸಿದೆ. ಸಾಮಾನ್ಯವಾಗಿ ಚಳ್ಳಕೆರೆ, ನಾಟಿ, ಬನ್ನೂರು, ನಾರಿ ಸುವರ್ಣ ಇನ್ನಿತರೆ ಯಾವುದೇ ಕುರಿಯಾಗಲಿ ಒಂದು ಅಥವಾ ಎರಡು ಮರಿ ಹಾಕುವುದು ಸಹಜ. ಆದರೆ, ಅಪರೂಪದಲ್ಲಿ ಅಪರೂಪ ಎಂಬಂತೆ ನಾಲ್ಕು ಮರಿಗಳನ್ನು ಹಾಕಿದೆ. ಎಲ್ಲಾ ನಾಲ್ಕೂ ಮರಿಗಳು ಆರೋಗ್ಯದಿಂದಿದ್ದು, ಲವಲವಿಕೆಯಿಂದ ಓಡಾಡಿಕೊಂಡಿವೆ. ತಮ್ಮ ತಾತ-ಅಪ್ಪಂದಿರ ಕಾಲದಿಂದಲೂ ವ್ಯವಸಾಯ, ಕುರಿ, ಮೇಕೆ ಸಾಕಾಣಿಕೆ ಕಸುಬು ಮಾಡುತ್ತಿದ್ದು, ನಮ್ಮ ಮನೆತನದಲ್ಲಿ ಇದೇ ಮೊದಲ ಬಾರಿಗೆ ಕುರಿ ನಾಲ್ಕು ಮರಿಗಳನ್ನು ಹಾಕಿದೆ ಎಂದು ರಾಜಣ್ಣ ಸಂತಸ ವ್ಯಕ್ತಪಡಿಸುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin