ವಾರದೊಳಗೆ NHRCಗೆ ಮಹಾನಿರ್ದೇಶಕರನ್ನು ನೇಮಕ ಮಾಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

sc

ನವದೆಹಲಿ,ಜ.23-ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ(ಎನ್‍ಎಚ್‍ಆರ್‍ಸಿ) ಮಹಾನಿರ್ದೇಶಕರನ್ನು ಒಂದು ವಾರದೊಳಗೆ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಇಂದು ಕೇಂದ್ರಕ್ಕೆ ಸೂಚನೆ ನೀಡಿದೆ.   ಅದೇ ರೀತಿ ಎನ್‍ಎಚ್‍ಆರ್‍ಸಿಗೆ ನಾಲ್ಕು ವಾರಗಳ ಒಳಗಾಗಿ ಸದಸ್ಯರುಗಳನ್ನು ನೇಮಕ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ.  ನಾವು ಈ ಪ್ರಕರಣದ ವಿಚಾರಣೆ ಆರಂಭಿಸಿದ್ದಲ್ಲಿ ನೀವು(ಕೇಂದ್ರ ಸರ್ಕಾರ) ತೊಂದರೆಗೆ ಸಿಲುಕುತ್ತೀರಿ. ಆದಕಾರಣ ಇನ್ನೊಂದು ವಾರಗಳ ಒಳಗಾಗಿ ಆಯೋಗಕ್ಕೆ ಮಹಾನಿರ್ದೇಶಕರನ್ನು ಹಾಗೂ ನಾಲ್ಕು ವಾರದೊಳಗೆ ಸದಸ್ಯರನ್ನು ನೇಮಕ ಮಾಡಿ ಎಂದು ನ್ಯಾಯಪೀಠ ಸೂಚಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin