ಹೆದ್ದಾರಿ ಬದಿಯಲ್ಲಿ ಡೇಂಜರ್ ಪೈಪ್‍ಗಳು : ಅಧಿಕಾರಿಗಳ ನಿರ್ಲಕ್ಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಸೂಲಿಬೆಲೆ, ಜ.23- ಹೊಸಕೋಟೆಯಿಂದ ಸೂಲಿಬೆಲೆ ಮಾರ್ಗವಾಗಿ ದೇವನಹಳ್ಳಿ ಅಂತರಾಷ್ಟ್ರೀಯು ವಿಮಾನ ನಿಲ್ದಾಣದ ರಾಷ್ಟ್ರೀಯ ಹೆದ್ದಾರಿ 207ರ ಬದಿಯಲ್ಲಿ ಹಾಕಿರುವ ಪೈಪ್‍ಲೈನ್ ಅರ್ಧಕ್ಕೆ ನಿಲ್ಲಿಸಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ.ಹೊಸಕೋಟೆಯಿಂದ ಸೂಲಿಬೆಲೆ ಹಾದು ಬಂದಿರುವ ಹೆದ್ದಾರಿ ಬದಿಯಲ್ಲಿ ಇತ್ತೀಚೆಗೆ ಕೇಬಲ್ ಆಳವಡಿಕೆ ಮಾಡಲು ಕಾಲುವೆಯನ್ನು ತೋಡಿ ಪೈಪ್‍ಗಳನ್ನು ಹಾಕಲಾಗಿದೆ. ಕೆಲವಡೆ ಯಂತ್ರದ ಮೂಲ ಭೂಮಿಯೊಳಗೆ ಪೈಪ್‍ಗಳನ್ನು ಜೋಡಿಸಲಾಗಿದೆ. ಹೀಗೆ ಜೋಡಿಸಿರುವ ಪೈಪ್‍ಗಳನ್ನು ಸಂಪೂರ್ಣವಾಗಿ ಮುಚ್ಚದೆ ಬಿಟ್ಟಿರುವುದು ಸವಾರರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಪ್ರಾಣ ಕಂಟಕವಾಗಿ ಪರಿಣಮಿಸಿವೆ.

ಹೆದ್ದಾರಿ ಒಂದು ಬದಿಯಲ್ಲಿ ಪೈಪ್ ಜೋಡಣೆ ಕಾರ್ಯ ಮಾಡಿದ ಮೇಲೆ ಮೇಲ್ಭಾಗದಲ್ಲಿ ಅರ್ಧ ಪೈಪ್‍ಗಳನ್ನು ಆಗೇ ಬಿಟ್ಟು ಸುಮ್ಮನಾಗಿದ್ದಾರೆ. ಹೀಗೆ ಬಿಟ್ಟ ಪೈಪ್ ಗಳು ಹೆದ್ದಾರಿಯಲ್ಲಿ ಸಂಚಾರಿಸುವ ಸವಾರರು, ಪಾದಚಾರಿಗಳ ಪ್ರಾಣಕ್ಕೆ ಕಂಟಕವಾಗಿದೆ.ಉದ್ದನೆಯ ಚೂಪಾದ ಪೈಪ್‍ಗಳು ಮೇಲೆದ್ದು ನಿಂತಿವೆ. ಸವಾರರು ಸ್ವಲ್ಪ ಎಚ್ಚರ ತಪ್ಪಿಸಿದರೂ ಅಪಾಯ ಗ್ಯಾರಂಟಿ.ಬೆಳಗಿನ ಸಮಯದಲ್ಲಿ ಇಲ್ಲೊಂದು ಪೈಪ್ ಗಳು ತೊಂದರೆಯನ್ನುಂಟು ಮಾಡುತ್ತವೆ ಎಂಬುದರ ಅರಿವು ಸವಾರರಿಗೆ ಇದ್ದರೂ ರಾತ್ರಿವೇಳೆ ಅಪಾಯಕಾರಿಯಾಗಿದೆ.ದ್ವಿಚಕ್ರವಾಹನಗಳು ಎದುರಿಗೆ ಬರುವ ಅತಿ ದೊಡ್ಡ ವಾಹನಗಳ ಅತಿಯಾದ ಬೆಳಕು ಕಣ್ಣಿಗೆ ಬಿದ್ದಾಗ ದ್ವಿಚಕ್ರವಾಹನ ಸವಾರರು ಪಾದಚಾರಿ ಮಾರ್ಗದಲ್ಲಿ ಸಂಚರಿಸಲು ಮುಂದಾಗುತ್ತಾರೆ.

ಹೀಗೆ ಕಡಿಮೆ ಬೆಳಕಿನಲ್ಲಿ ಯಾರಾದರೂ ವಾಹನ ಸವಾರರು ಪುಟ್ಪಾತ್ ಗೆ ಇಳಿದರೇ ಅಪಾಯಕ್ಕೆ ಸಿಲುಕುವ ಸಂಭವ ಹೆಚ್ಚಾಗಿದೆ. ಸವಾರರಿಗೆ ತೊಂದರೆಯಾಗುವಂತ ರೀತಿಯಲ್ಲಿ ಪೈಪ್‍ಗಳು ನಿಂತಿದ್ದು, ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಆಸ್ಪತ್ರೆ ಪಾಲಾಗುತ್ತಾರೆ.ಹೆದ್ದಾರಿ ಬದಿಯಲ್ಲಿ ಕೇಬಲ್ ಪೈಪ್‍ಗಳನ್ನು ಆಳವಡಿಸಿದ ನಂತರ ಅಧಿಕಾರಿಗಳು ಅವುಗಳನ್ನು ಸಂಪೂರ್ಣವಾಗಿ ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಸಮಸ್ಯೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಇದನ್ನು ಮುಚ್ಚುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin