ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಕೆಟ್ಟ ಬುದ್ಧಿಯುಳ್ಳವರು ಯಾವುದನ್ನು ಬಿಡಲಾರರೋ, ನಾವು ಮುದಿತನದಿಂದ ದುರ್ಬಲರಾದರೂ ಯಾವುದು ಕಡಿಮೆ ಯಾಗುವುದಿಲ್ಲವೋ ಅಂತಹ ಆಸೆಯನ್ನು ಜಾಣನು ಬಿಡಬೇಕು. ಆಗ ಅವನಿಗೆ ಎಲ್ಲ ವಿಧದಲ್ಲಿಯೂ ಸುಖವೇ ಆಗುತ್ತದೆ. – ವಿಷ್ಣುಪುರಾಣ

Rashi

ಪಂಚಾಂಗ : ಮಂಗಳವಾರ , 24.01.2017

ಸೂರ್ಯ ಉದಯ ಬೆ.6.46 / ಸೂರ್ಯ ಅಸ್ತ  ಸಂ.6.17
ಚಂದ್ರ ಉದಯ  ಮ.3.19 / ಚಂದ್ರ ಅಸ್ತ  ರಾ.4.21
ದುರ್ಮುಖಿ ಸಂವತ್ಸರ / ಉತ್ತರಾಯಣ / ಹಿಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ
ತಿಥಿ: ದ್ವಾದಶಿ  (ರಾ.2.23) / ನಕ್ಷತ್ರ: ಜ್ಯೇಷ್ಠಾ (ಸಾ.4.33) / ಯೋಗ:ಧ್ರುವ  (ಮ.3.33)
ಕರಣ: ಕೌಲವ-ತೈತಿಲ  (ಮ.3.25-ರಾ.2.23) / ಮಳೆ ನಕ್ಷತ್ರ: ಉತ್ತರಾಷಾಢ
ಮಾಸ: ಮಕರ / ತೇದಿ:11

ರಾಶಿ ಭವಿಷ್ಯ :

ಮೇಷ : ನಾನಾ ರೀತಿಯಲ್ಲಿ ಧನ ಸಂಗ್ರಹವಾಗಲಿದೆ, ಉದ್ಯೋಗ ವ್ಯವಹಾರಗಳಲ್ಲಿ ಲಾಭಾಂಶ ಹೆಚ್ಚಾಗುವುದು
ವೃಷಭ : ಮನೆಯಲ್ಲಿ ಒಂಟಿತನ ಬೇಸರ ತಂದೀತು, ತಪ್ಪು ಅಭಿಪ್ರಾಯಗಳು ಕಲಹಕ್ಕೆ ಕಾರಣವಾಗಬಹುದು
ಮಿಥುನ: ವಿದ್ಯಾರ್ಥಿಗಳ ಪರಿಶ್ರಮ ನಿರೀಕ್ಷಿತ ರೀತಿ ಯಲ್ಲಿ ಪರಿಣಾಮ ಬೀರಲಾರದು
ಕಟಕ: ಹೊಸ ವ್ಯಾಪಾರ- ವ್ಯವ ಹಾರಗಳಿಗೆ ಇದು ಸಕಾಲವಲ್ಲ, ಸಂಚಾರದಲ್ಲಿ ಜಾಗ್ರತೆ ಇರಲಿ
ಸಿಂಹ: ವೃತ್ತಿರಂಗದಲ್ಲಿ ಹಿತಶತ್ರು ಗಳ ಕಿರಿಕಿರಿ ಗೋಚರಕ್ಕೆ ಬಂದೀತು
ಕನ್ಯಾ: ನ್ಯಾಯಾಲಯದ ಕೆಲಸ- ಕಾರ್ಯಗಳಿಗೆ ಚುರುಕು ಮುಟ್ಟಿಸಬೇಕು
ತುಲಾ: ನೂತನ ಕೆಲಸ-ಕಾರ್ಯ ಗಳು ವಿಳಂಬವಾದರೂ ಅನುಕೂಲವಾಗಲಿದೆ.
ವೃಶ್ಚಿಕ : ರಾಜಕೀಯ ವರ್ಗದವರಿಗೆ ತುಸು ಸಮಾಧಾನಕರ ವಾತಾವರಣವಿರುತ್ತದೆ, ಆಗಾಗ ದೇಹಾಯಾಸ ತಂದೀತು
ಧನುಸ್ಸು: ಯುವತಿಯರಿಗೆ ವೈವಾಹಿಕ ಭಾಗ್ಯದ ಕನಸು ನನಸಾಗುತ್ತದೆ
ಮಕರ: ಸಣ್ಣ ಸಣ್ಣ ವಿಚಾರಗಳಲ್ಲಿ ಮನಸ್ಸನ್ನು ಕೆಡಿಸಿಕೊಳ್ಳದಿರಿ
ಕುಂಭ : ಸಹಧರ್ಮಿಣಿಯ ಸಹಕಾರವಿದ್ದರೂ ಕಿರಿಕಿರಿ ಮೀನ: ಶತ್ರುಗಳಿಂದ ದೂರವಿದ್ದಷ್ಟು ಉತ್ತಮ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin