ಕಸದ ಹೆಸರಲ್ಲಿ ಕೋಟಿ ಕೋಟಿ ಲೂಟಿ : ಸಿಬಿಐ ತನಿಖೆಗೆ ಎನ್.ಆರ್.ರಮೇಶ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh
ಬೆಂಗಳೂರು, ಜ.24-ನಗರದ ಕಸವನ್ನೇ ರಸ ಮಾಡಿಕೊಂಡು ಕೋಟ್ಯಂತರ ರೂ. ವಂಚಿಸಿರುವ ಎರಡು ಬೃಹತ್ ಪ್ರಕರಣಗಳನ್ನು ಬಯಲು ಮಾಡಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಸಾವಿರಾರು ಕೋಟಿ ರೂ.ಗಳ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿಂದು ಕಸ ಮಾಫಿಯಾದಲ್ಲಿ ತೊಡಗಿ ಕೊಂಡಿರುವವರ ಹೆಸರುಗಳನ್ನು ಬಹಿರಂಗ ಪಡಿಸಿದ್ದೇ ಅಲ್ಲದೆ, ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 48 ಗುತ್ತಿಗೆದಾರರು, ವಂಚನೆಗೆ ಸಹಕರಿಸಿದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಹಿಂದಿನ ಆಯುಕ್ತ ಕುಮಾರ್‍ನಾಯಕ್, ವಿಶೇಷ ಆಯುಕ್ತರಾದ ದರ್ಪಣ್‍ಜೈನ್, ಸುಬೋದ್‍ಯಾದವ್ ಮತ್ತಿತರ ಅಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಲಾಗುವುದು ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಏನಿದು ಹಗರಣ?: ಕಸ ವಿಲೇವಾರಿ ಗುತ್ತಿಗೆದಾರರ ಕಾರ್ಯಾದೇಶ ಪತ್ರ ರದ್ದುಗೊಳಿಸಿ ಇಲಾಖೆ ವತಿಯಿಂದಲೇ ಕಾರ್ಯ ನಿರ್ವಹಿಸಬೇಕು ಎಂದು 2015ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನೇ ವಂಚಕ ಗುತ್ತಿಗೆದಾರರು, ಭ್ರಷ್ಟ ಅಕಾರಿಗಳು ಮತ್ತು ನಿರ್ಲಜ್ಜ ರಾಜಕಾರಣಿಗಳು ತಮ್ಮ ಅಕ್ರಮ ಹಣ ಗಳಿಕೆಯ ದಾರಿಯನ್ನಾಗಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಈ ಅಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರ ಕೃಪಾ ಕಟಾಕ್ಷವಿದೆ ಎನ್ನುವುದು ಎನ್.ಆರ್.ರಮೇಶ್ ಅವರ ಆರೋಪವಾಗಿದೆ.  ನ್ಯಾಯಾಲಯ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಸೂಚಿಸಿದ್ದ ವಂಚಕ ಗುತ್ತಿಗೆದಾರರಿಗೆ ಬೇರೆ ಬೇರೆ ಹೆಸರುಗಳಲ್ಲಿ ಕಾರ್ಯಾದೇಶ ನೀಡಿ ವಂಚನೆ ಮಾಡಲಾಗಿದೆ.

ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನೇ ಮೃಷ್ಠಾನ್ನ ಭೋಜನ ಮಾಡಿಕೊಂಡಿರುವ ವಂಚಕರು, ವಾಸ್ತವವಾಗಿ ಖರ್ಚಾಗಬೇಕಾಗಿದ್ದ ಮೊತ್ತಕ್ಕಿಂತಲೂ ಸುಮಾರು 400 ಕೋಟಿ ಹೆಚ್ಚು ಹಣ ಬಳಕೆ ಮಾಡಿಕೊಂಡು ಹಗಲು ದರೋಡೆ ಮಾಡುತ್ತಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರ ಸಂಖ್ಯೆ ಕೇವಲ 2,734 ಮಾತ್ರ. ಆದರೆ ವಂಚಕ ಗುತ್ತಿಗೆದಾರರು ನಗರದಲ್ಲಿ 22,176 ಮಂದಿ ಗುತ್ತಿಗೆ ಪೌರಕಾರ್ಮಿಕರು ಕಸ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಸುಳ್ಳು ಲೆಕ್ಕ ತೋರಿಸಿ ಕೋಟ್ಯಂತರ ರೂ. ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ.

ವಂಚಕ ಗುತ್ತಿಗೆದಾರರು ಇಷ್ಟೆಲ್ಲಾ ಅಕ್ರಮ ಮಾಡುತ್ತಿದ್ದರೂ ಪಾಲಿಕೆ ಅಕಾರಿಗಳು ಕಣ್ಮುಚ್ಚಿ ಕೊಂಡು ಹಣ ಬಿಡುಗಡೆ ಮಾಡುತ್ತಿರುವುದನ್ನು ನೋಡಿದರೆ ಅವರೂ ಅಕ್ರಮದಲ್ಲಿ ಭಾಗಿ ಯಾಗಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.  ಇಲಾಖೆ ವತಿಯಿಂದ ನಿರ್ವ ಹಣೆ ಹೆಸರಿನಲ್ಲಿ ಈ ಹಿಂದೆ ಗುತ್ತಿಗೆದಾರರಿಗೆ ನೀಡಲಾಗುತ್ತಿದ್ದ ಹಣದ ನಾಲ್ಕು ಪಟ್ಟು ಹೆಚ್ಚು ಹಣವನ್ನು ಬಿಡುಗಡೆ ಮಾಡ ಲಾಗಿದೆ. 22,176 ಮಂದಿಗೆ ಪಿಎಫ್ ಮತ್ತು ಇಎಸ್‍ಐ ಪಾವತಿ ಸುತ್ತಿಲ್ಲ ಎನ್ನುವುದನ್ನು ಸಫಾಯಿ ಕರ್ಮಚಾರಿಗಳ ಆಯೋಗದ ತನಿಖೆಯಲ್ಲಿ ಪತ್ತೆಯಾಗಿದೆ.  ಪೌರಕಾರ್ಮಿಕರ ಶೇ.90ರಷ್ಟು ಪಿಎಫ್ ಮತ್ತ್ತು ಇಎಸ್‍ಐನ ನೂರಾರು ಕೋಟಿ ಹಣವನ್ನು ವಂಚನೆ ಮಾಡಲಾಗಿದೆ. ಈ ಅವ್ಯ ವಹಾರದ ವಿರುದ್ಧ ಈಗಾಗಲೇ ಆಯುಕ್ತರು ಸಿಐಡಿ ತನಿಖೆಗೂ ಆದೇಶಿಸಿದ್ದಾರೆ. 22,176 ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು 5 ಕೋಟಿ 77 ಲಕ್ಷ ಇಎಸ್‍ಐ, ಪಿಎಫ್ ಹಣ ತುಂಬಿಲ್ಲ.

ಮತ್ತೊಂದು ಹಗರಣ:

ವೈಜ್ಞಾ ನಿಕ ಕಸ ಸಂಸ್ಕರಣಾ ಘಟಕಗಳ ನಿರ್ಮಾಣ ಮತ್ತು ನಿರ್ವಹಣೆ ಹೆಸರಿನಲ್ಲಿ 440 ಕೋಟಿ ರೂ. ಗಳನ್ನು ದುರುಪ ಯೋಗಪಡಿಸಿಕೊಳ್ಳಲಾಗಿದೆ.   ಕೆಯುಐಡಿಎಫ್‍ಸಿಯ 120 ಕೋಟಿ, ಸರ್ಕಾರದ 150 ಹಾಗೂ ನಗರೋತ್ಥಾನ ಯೋಜನೆಯ 170 ಕೋಟಿ ಸೇರಿದಂತೆ ಒಟ್ಟು 440 ಕೋಟಿ ಹಣ ಬಳಕೆ ಮಾಡಿ ಕೊಂಡಿದ್ದರು. ಕನ್ನಹಳ್ಳಿ ಘಟಕ ಹೊರತುಪಡಿಸಿ ಯಾವುದೇ ಕಸ ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ಸಂಸ್ಕರಣೆ ಮಾಡುತ್ತಿಲ್ಲ.  ಈ ಹಣವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದ್ದು, ಕಸ ವಿಲೇವಾರಿ ಘಟಕಗಳಲ್ಲಿ ಕೇವಲ ಭೂ ಭರ್ತಿ ಮಾಡಿ ವಂಚಿಸ ಲಾಗು ತ್ತಿದೆ. ಹೀಗಾಗಿ ಈ ಕಸ ವಿಲೇವಾರಿ ಅಕ್ರಮದಲ್ಲಿ ಕೋಟ್ಯಾ ಂತರ ರೂ. ವಂಚಿಸಿರುವ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಹಾಗೂ ಸಿಬಿಐ ತನಿಖೆಗೆ ವಹಿಸ ಬೇಕು ಎಂದು ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin