ತಲೆಮರೆಸಿಕೊಂಡಿದ್ದ 6 ಜನ ಶಾಸಕ ‘ಕಾಗೆ’ ಸಂಬಂಧಿಕರು ಪೊಲೀಸರಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

Raju-Kage-Vivek-Shetty
ಬೆಳಗಾವಿ, ಜ.24- ಗೂಂಡಾಗಿರಿ ಪ್ರಕರಣಕ್ಕೆ ಸಂಬಂಸಿದಂತೆ ತಲೆ ಮರೆಸಿಕೊಂಡಿದ್ದ ಶಾಸಕ ರಾಜು ಕಾಗೆ ಕುಟುಂಬದ ಆರು ಮಂದಿ ಆರೋಪಿಗಳು ಇಂದು ಪೊಲೀಸರಿಗೆ ಶರಣಾಗಿದ್ದಾರೆ.  ಜ.9 ರಂದು ತಲೆ ಮರೆಸಿಕೊಂಡಿದ್ದ 13 ಆರೋಪಿಗಳ ಪೈಕಿ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದರು.  ನಿನ್ನೆ ಬೆಳಗಾವಿ ಜಿಲ್ಲೆಯ   ಅಥಣಿ ತಾಲೂಕಿನ ಕಾಗವಾಡ ಪೊಲೀಸರ ಮುಂದೆ ತಲೆಮರೆಸಿಕೊಂಡಿದ್ದ ಆರೋಪಿಗಳು ಶರಣಾಗಿದ್ದಾರೆ.  ಶೇಖರ್‍ಕಾಗೆ, ಅಶೋಕ್ ಕಾಗೆ, ಗಜೂ, ಸದಾಶಿವ ಕಾಗೆ, ಗಜಾನನ ಮಹದೇವ ಕಾಗೆ, ವಿನೋದ್ ಪಾಟೀಲ್, ಅಶೋಕ್ ಪಾಟೀಲ್ ಶರಣಾದ ಆರೋಪಿಗಳು.

ಪ್ರಕರಣಕ್ಕೆ ಸಂಬಂಸಿದಂತೆ ಅಥಣಿ ತಾಲೂಕಿನ ಮಂಗಸೂಳಿ ಸರ್ಕಾರಿ ಆಸ್ಪತ್ರೆ ವೈದ್ಯ ಪ್ರಸನ್ನ ಕಾಗೆ ಇನ್ನೂ ತಲೆ ಮರೆಸಿಕೊಂಡಿದ್ದಾರೆ.  ಇಂದು ಆರೋಪಿಗಳನ್ನು ಅಥಣಿಯ ಜೆಎಂಎಫ್‍ಸಿ ನ್ಯಾಯಾಲಯದ ಮುಂದೆ ಪೊಲೀಸರು ಹಾಜರು ಪಡಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin