ಮಗ – ಸೊಸೆ ವಿಚ್ಛೇದನದಿಂದ ಮನನೊಂದಿದ್ದ ತಾಯಿ ಆತ್ಮಹತ್ಯೆಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

Suicide-e

ತುಮಕೂರು, ಜ.24- ಮಗ ಹಾಗೂ ಸೊಸೆಯ ವಿಚ್ಛೇದನದಿಂದ ಮನನೊಂದಿದ್ದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎನ್‍ಇಪಿಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಶೋಕನಗರದ ನಿವಾಸಿ ಶಾರದಮ್ಮ (60) ಆತ್ಮಹತ್ಯೆಗೆ ಶರಣಾದ ಮಹಿಳೆ.
ಘಟನೆ ಹಿನ್ನೆಲೆ:
ಮಗ ಹಾಗೂ ಸೊಸೆಯ ನಡುವೆ ಹೊಂದಾಣಿಕೆ ಇಲ್ಲದೆ ಇರುವುದರಿಂದ ವಿಚ್ಛೇದನ ಪಡೆದಿದ್ದರು. ಇವರಿಂದ ಮನೆಯಲ್ಲಿ ಎಲ್ಲರೂ ತೀವ್ರ ಬೇಸರಗೊಂಡಿದ್ದರು. ಮಗನಿಗೆ ಇಬ್ಬರು ಮಕ್ಕಳಿದ್ದು, ತಾಯಿ ಮನೆ ತಂದೆಯ ಮನೆಗೆ ಓಡಾಡಿಕೊಂಡಿದ್ದರು. ನಿನ್ನೆ ಮೊಮ್ಮಕ್ಕಳು ಮನೆಗೆ ಬಂದಿದ್ದು, ಅವರ ಜತೆ ಮಾತನಾಡುತ್ತ ನಗು ನಗುತ್ತಲೇ ಇದ್ದರು. ಈ ಸಮಯದಲ್ಲಿ ಶಾರದಮ್ಮ ಸೊಸೆಯನ್ನು ನೆನಪಿಸಿಕೊಂಡು ಬೇಸರಗೊಂಡಿದ್ದರು.  ನಂತರ ತನ್ನ ರೂಮ್‍ಗೆ ಹೋಗಿದ್ದಾರೆ. ಊಟ ಮಾಡಲು ಕರೆಯಲೆಂದು ಹೋಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಪ್ರಕರಣವನ್ನು ಕ್ರೈಂ ವಿಭಾಗದ ಸಬ್‍ಇನ್ಸ್‍ಪೆಕ್ಟರ್ ತಿಮ್ಮಯ್ಯ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin