ಮುಂಬೈನಲ್ಲಿ ನಟಿ ಪಾರುಲ್ ಯಾದವ್ ಮೇಲೆ ಬೀದಿನಾಯಿಗಳ ದಾಳಿ, ಆಸ್ಪತ್ರೆಗೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Parul-Yadav

ಮುಂಬೈ. ಜ.24 : ಮುಂಬೈನ ಜೋಗೇಶ್ವರ್ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ   ನಟಿ ಪಾರುಲ್ ಯಾದವ್ ಅವರ ಮೇಲೆ 6 ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ನಡೆದಿದೆ. ಅವರ ತಲೆ, ಕೈ, ಕುತ್ತಿಗೆ, ಕಾಲುಗಳಿಗೆ ಗಾಯಗಳಾಗಿವೆ.  ತಲೆಗೆ ಆಳವಾದ ಗಾಯಗಳಾಗಿದ್ದು, ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 15 ನಿಮಿಷ ನಾಯಿಗಳು ಅವರನ್ನು ಎಳೆದಾಡಿವೆ.

ಯಾರೂ ಸಹಾಯಕ್ಕೆ ಬರಲಿಲ್ಲ :
ನಟಿಯೊಬ್ಬರು ನಾಯಿದಾಳಿಗೆ ಸಿಲುಕಿ ನಡುರಸ್ತೆಯಲ್ಲಿ ರಕ್ತದ ಮಡುವಿನಲ್ಲಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರದಿರುವುದು ಮುಂಬೈ ಜನರ ಮಾನವೀಯತೆ ಪ್ರಶ್ನಿಸುವಂತೆ ಮಾಡಿದೆ. ಪಾರೂಲ್ ಯಾದವ್ ತಮ್ಮ ಮೇಲೆ ನಾಯಿಗಳು ದಾಳಿ ಮಾಡಿದ ವೇಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ . ಆದರೆ, ಅಕ್ಕಪಕ್ಕದ ಜನ ಮೂಕಪ್ರೇಕ್ಷಕರಾಗಿದ್ದರೇ ಹೊರತೂ ಯಾರೊಬ್ಬರೂ ನೆರವಿಗೆ ಬಂದಿಲ್ಲ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin