‘ರಯೀಸ್’ ಪ್ರಮೋಷನ್ ವೇಳೆ ಕಾಲ್ತುಳಿತದಿಂದ ಶಾರುಖ್ ಅಭಿಮಾನಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Raeees
ವಡೋದರ (ಗುಜರಾತ್), ಜ.24-ಬಾಲಿವುಡ್ ಸೂಪರ್‍ಸ್ಟಾರ್ ಶಾರುಖ್ ಖಾನ್‍ರನ್ನು ನೋಡಲು ಭಾರೀ ಸಂಖ್ಯೆಯ ಅಭಿಮಾನಿಗಳ ನಡುವೆ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಯುವಕನೊಬ್ಬ ಮೃತಪಟ್ಟು, ಮೂವರು ಪೊಲೀಸರಿಗೆ ತೀವ್ರ ಗಾಯಗಳಾದ ಘಟನೆ ನಿನ್ನೆ ರಾತ್ರಿ ಗುಜರಾಜ್‍ನ ವಡೋದರ ರೈಲು ನಿಲ್ದಾಣದಲ್ಲಿ ನಡೆದಿದೆ. ರಯೀಸ್ ಸಿನಿಮಾದ ಪ್ರಚಾರಕ್ಕಾಗಿ ಆಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಶಾರುಖ್ ಆಗಮಿಸಲಿದ್ದಾರೆ ಎಂಬ ಸುದ್ದಿ ತಿಳಿದು ನಿನ್ನೆ ಸಂಜೆಯಿಂದಲೇ ರೈಲ್ವೆ ನಿಲ್ದಾಣದಲ್ಲಿ ಸಹಸ್ರಾರು ಅಭಿಮಾನಿಗಳು ಜಮಾಯಿಸಿದ್ದರು. ಮುಂಬೈನಿಂದ ದೆಹಲಿಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಿವುಡ್ ನಟ ಈ ನಿಲ್ದಾಣ ಪ್ಲಾಟ್‍ಫಾರಂ ನಂ-6ಕ್ಕೆ ರಾತ್ರಿ 10.30ರಲ್ಲಿ ಆಗಮಿಸಿ 10 ನಿಮಿಷಗಳ ಕಾಲ ಅಭಿಮಾನಿಗಳನ್ನು ಭೇಟಿ ಮಾಡುವ ಕಾರ್ಯಕ್ರಮ ಇತ್ತು.

Raeees1

ರೈಲಿನಲ್ಲಿ ಶಾರುಖ್ ಬಂದಾಗ ಅವರನ್ನು ನೋಡಲು ಮತ್ತು ಫೋಟೋಗಳನ್ನು ಕ್ಲಿಕ್ಕಿಸಲು ಅಭಿಮಾನಿಗಳ ನಡುವೆ ತಳ್ಳಾಟ-ನೂಕಾಟಕ್ಕೆ ಕಾರಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.. ಈ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ ಫರೀದ್ ಖಾನ್ ಪಠಾಣ್ ಎಂಬ ಅಭಿಮಾನಿ ಮೃತಪಟ್ಟನೆಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ತೀವ್ರ ಗಾಯಗೊಂಡಿರುವ ಮೂವರು ಪೊಲೀಸರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Raeees2

Facebook Comments

Sri Raghav

Admin