2017ನೇ ಸಾಲಿನ ಪದ್ಮ ಪ್ರಶಸ್ತಿ ಪಟ್ಟಿಯಲ್ಲಿ ಧೋನಿ ಸೇರಿದಂತೆ 150 ಸಾಧಕರ ಹೆಸರು

ಈ ಸುದ್ದಿಯನ್ನು ಶೇರ್ ಮಾಡಿ

Padma-Awards

ನವದೆಹಲಿ, ಜ.24-ದೇಶದ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರವಾದ 2017ನೇ ಸಾಲಿನ ಪದ್ಮ ಪ್ರಶಸ್ತಿಗಳು ಇಂದು ಸಂಜೆ ಅಥವಾ ನಾಳೆ ಅಧಿಕೃತವಾಗಿ ಪ್ರಕಟಗೊಳ್ಳಲಿದೆ. ಖ್ಯಾತ ಕ್ರಿಕೆಟ್ ಪಟು ಮಹೇಂದ್ರ ಸಿಂಗ್ ಧೋನಿ, ಒಲಿಂಪಿಕ್ ಪದಕ ವಿಜೇತರಾದ ಪಿ.ವಿ.ಸಿಂಧು, ಸಾಕ್ಷಿ ಮಲ್ಲಿಕ್, ಕೋಚ್ ಪುಲ್ಲೇಲ ಗೋಪಿಚಂದ್, ಸಾಮಾಜಿಕ ಕಾರ್ಯಕರ್ತ ಅಲೋಕ್ ಸಾಗರ್, ಕರ್ನಾಟಕದ ಖ್ಯಾತ ಜನಪದ ಹಾಡುಗಾರ್ತಿ ಸುಕ್ರಿ ಬೊಮ್ಮಗೌಡ ಸೇರಿದಂತೆ 150 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳು ಲಭಿಸುವ ಸಾಧ್ಯತೆ ಇದೆ.  ಈಗಾಗಲೇ 9 ಸದಸ್ಯರ ಆಯ್ಕೆ ಸಮಿತಿಯು 150 ಸಾಧಕರ ಪಟ್ಟಿಯನ್ನು ಅಖೈರುಗೊಳಿಸಿದ್ದು, ಇಂದು ಸಂಜೆ ಅಥವಾ ನಾಳೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin